
ರಂಗಭೂಮಿಯ ಹಿರಿಯ ಕಲಾವಿದ, ಗಾಯಕ, ನಾಟಕ ರಚನೆಕಾರ, ನಿರ್ದೇಶಕ ಕೆ.ಪಿ.ಶಾಂಭವ ಕಾರ್ಕಳ ಇಂದು ಬೆಳಿಗ್ಗೆ ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ.
ತನ್ನ ಬಾಲ್ಯದಿಂದಲೇ ರಂಗಭೂಮಿಯಲ್ಲಿ ತನ್ನನ್ನು ತೊಡಗಿಕೊಂಡ ಇವರು ಕರಾವಳಿ ಸಂಗೀತ ಒಕ್ಕೂಟದ ಸದಸ್ಯ ರಾಗಿದ್ದು , ದೇವೆರ್ ತುಳು ಚಿತ್ರದಲ್ಲಿ ಇವರ ಮನೋಜ್ಞ ನಟನೆ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಪತ್ನಿ, ಓರ್ವ ಪುತ್ರ, ಪುತ್ರಿ ಯನ್ನಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರವು ಮಧ್ಯಾಹ್ನ 3.00 ಗಂಟೆಗೆ ನೆರವೇರಲಿದೆ.













