21.3 C
Udupi
Friday, January 31, 2025
spot_img
spot_img
HomeBlogಯುವಶಕ್ತಿ ಸೇವಾಪಥ ದ.ಕ, ಯುವ ಸೇವಾ ಸಂಭ್ರಮ

ಯುವಶಕ್ತಿ ಸೇವಾಪಥ ದ.ಕ, ಯುವ ಸೇವಾ ಸಂಭ್ರಮ

ಮಿತ್ರಸಂಸ್ಥೆ ಯುವಶಕ್ತಿ ದುರ್ಗಾಪುರ ನೇತೃತ್ವದಲ್ಲಿ ಯುವಶಕ್ತಿ ಸೇವಾಪಥದ ಮೂರನೇ ವರ್ಷದ ಯುವಸೇವಾಸಂಭ್ರಮ ಯಕ್ಷಸಭಾಭವನ ದುರ್ಗಾಪುರ ಕಿನ್ಯಾದಲ್ಲಿ 26.01.2025 ನೇ ರವಿವಾರ ನೆರವೇರಿತು.


ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಬಾಬು ಶ್ರೀ ಶಾಸ್ತ ಕಿನ್ಯಾ ವಹಿಸಿದ್ದು ರಾಜ ಬೆಳ್ಚಪ್ಪಾಡ ಉದ್ಯಾವರ ಮಾಡ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.

ಡಾ.ಅರುಣ್ ಉಳ್ಳಾಲ್ ಪ್ರಧಾನ ಭಾಷಣಗೈದರು,

ಮೋಹನ್ ದಾಸ್ ಎ,ಡಾ.ದಿವ್ಯಾ ಶೆಟ್ಟಿ ಮಂಗಳೂರು,ಅಶ್ವಿನ್ ಕೊಲ್ಯ,ದಯಾನಂದ ಭಟ್ ಕಾಸರಗೋಡು,ಪಾರ್ಥಸಾರಥಿ ಕಿನ್ಯಾ,ದೇವಿಪ್ರಸಾದ್ ಬೇಂಗದಡಿ,ಜಯರಾಜ್ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾಜ ಸೇವಕರಾದ ಜಯಪ್ರಕಾಶ್ ತಲಪಾಡಿ ಹಾಗೂ ನಾರಾಯಣ ಕುಂಪಲ, ವಿಜಯಕುಮಾರ್ ರೈ ಕುಂಬ್ಳೆರವರನ್ನು ಸನ್ಮಾನಿಸಲಾಯಿತು..ಸೇವಾಸಂಸ್ಥೆಗಳನ್ನು ಹಾಗೂ ಮಿತ್ರಸಂಸ್ಥೆಗಳನ್ನು ಗೌರವಿಸಲಾಯಿತು.

20 ಫಲಾನುಭವಿಗಳಿಗೆ 5 ಲಕ್ಷ ರೂ ಸೇವಾನಿಧಿ ಹಸ್ತಾಂತರಿಸಲಾಯಿತು.ಕಾರ್ಯಕರ್ತ ಕ್ಷೇಮನಿಧಿಗೆ ರೂ 49,000 ಸಮರ್ಪಿಸಲಾಯಿತು.
ಯುವಶಕ್ತಿ ಕಾರ್ಯಕರ್ತ ರಘು ಎಕ್ಕೂರುರವರ ಧನಶ್ರೀ ಆಂಬುಲೆನ್ಸ್ ಗಣ್ಯರ ಸಮ್ಮುಖ ಲೋಕಾರ್ಪಣೆಯಾಯಿತು.

ರಮೇಶ್ ಆಳ್ವ ದೇವೀಪುರ ಸ್ವಾಗತಿಸಿ ರಾಜೇಂದ್ರ ಶೆಟ್ಟಿ ತಟ್ಟಾಜೆ ಧನ್ಯವಾದಗೈದರು.
ದುರ್ಗಾಪ್ರಸಾದ್ ಅಮೈ ಹಾಗೂ ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು
.

ಯುವಶಕ್ತಿ ತಂಡದಿಂದ ಇಲ್ಲಿಯವರೆಗೆ 1 ಕೋಟಿ 18 ಲಕ್ಷ ರೂ ಗಳನು ಸಮಾಜಕ್ಕೆ ಸಮರ್ಪಣೆಯಾಗಿದ್ದು ಯುವಶಕ್ತಿ ರಕ್ತನಿಧಿಯ ಮೂಲಕ 15,000+ ಯುನಿಟ್ ರಕ್ತ ಆಸ್ಪತ್ರೆಗಳಿಗೆ ಪೂರೈಕೆಯಾಗಿದೆ‌.

ಈ ಸಂಭ್ರಮದ ಸಲುವಾಗಿ ಸಂತೃಪ್ತಿ ಎನ್ನುವ ಹೆಸರಿನಿಂದ ಫೆಬ್ರವರಿ 15 ರಂದು ಕಡೇಶಿವಾಲಯದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page