27.4 C
Udupi
Wednesday, May 6, 2026
spot_img
spot_img
HomeBlogಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಆಶ್ರಯದಲ್ಲಿ ಶೈಕ್ಷಣಿಕ ಜಿಲ್ಲೆ ಶಿರಸಿಯಲ್ಲಿ ಪ್ರೇರಣಾ ಶಿಬಿರ - 2025

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಆಶ್ರಯದಲ್ಲಿ ಶೈಕ್ಷಣಿಕ ಜಿಲ್ಲೆ ಶಿರಸಿಯಲ್ಲಿ ಪ್ರೇರಣಾ ಶಿಬಿರ – 2025

ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಶಿರಸಿ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ
ವಸತಿಯುತ ಪ್ರೇರಣಾ ಶಿಬಿರದ ಉದ್ಘಾಟನಾ ಸಮಾರಂಭ 27.01.2025 ರಂದು ಲಯನ್ಸ್ ಪ್ರೌಢಶಾಲಾ ಸಭಾಂಗಣ, ಶಿರಸಿ (ಉ. ಕ )ಯಲ್ಲಿ ಉದ್ಘಾಟನೆಗೊಂಡಿತು.


ಉದ್ಘಾಟಕರಾಗಿ ಆಗಮಿಸಿದ ಶಿರಸಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಎಂ.ಎಸ್ ಪ್ರಸನ್ನಕುಮಾರ್ ರವರು ಪ್ರೇರಣಾ ಶಿಬಿರ ಸಾಗಿ ಬಂದ ಹಾದಿಯ ಕುರಿತು ಮಾತನಾಡಿದರು. ಕಳೆದ ಬಾರಿಯ ವಾರ್ಷಿಕ ಫಲಿತಾಂಶದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ 39 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ಅತ್ಯುತ್ತಮ ಅಂಕಗಳೊAದಿಗೆ ಗುರುತಿಸಿಕೊAಡಿದ್ದು, ಈ ಪ್ರೇರಣಾ ಶಿಬಿರಕ್ಕೆ ಸಹಕರಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳದ ಸಹಕಾರವನ್ನು
ಸ್ಮರಿಸಿದರು.


ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್ ರವರು ಎಸ್.ಎಸ್.ಎಲ್.ಸಿ ಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುವ ಸಲುವಾಗಿ ವಿಶೇಷ ತರಬೇತಿ ನೀಡುವ ಈ ಪ್ರೇರಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು. ವಿದ್ಯಾರ್ಜನೆಯು ಪ್ರಾಮಾಣಿಕ ಪ್ರಯತ್ನ, ನಿರಂತರ ಶ್ರಮದ ನೆಲೆಯಲ್ಲಿ ಪ್ರಾಪ್ತ ವಾಗುವುದು ಎಂದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಎಂ.ಎಸ್ ಹೆಗಡೆ, ಪ್ರಾಚಾರ್ಯರು, ಡಯಟ್ ಶಿರಸಿ ಇವರು ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಇಂತಹ ಪ್ರೇರಣಾ ಶಿಬಿರಗಳು
ಪ್ರೇರಣೆಯಾಗಲಿ ಎಂದರು. ಶ್ರೀ ಸದಾನಂದ ಸ್ವಾಮಿ, ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಛೇರಿ, ಶಿರಸಿ ಇವರು ವಿದ್ಯಾರ್ಥಿಗಳ ಪ್ರಯತ್ನ, ಶಿಕ್ಷಕರ ಪ್ರಯತ್ನದ ಜೊತೆ ಜೊತೆಗೆ ಪ್ರೇರಣ ಶಿಬಿರವು ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಸಹಕಾರಿಯಾಗಲಿದೆ ಎಂದರು. ಲಯನ್ಸ್ ಶಿಕ್ಷಣ ಸಂಸ್ಥೆಯ
ಅಧ್ಯಕ್ಷರಾದ ಲಯನ್ ಲೋಕೇಶ್ ಹೆಗಡೆಯವರು ಪ್ರೇರಣಾ
ಶಿಬಿರದಲ್ಲಿ ಸಂಸ್ಕಾರಯುತ ಶಿಕ್ಷಣ ಪಡೆಯಲಿರುವ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು
ಶುಭ ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಮುರಾರಿ ಭಟ್, ವ್ಯವಸ್ಥಾಪಕರು, ರಾಮಕೃಷ್ಣ ಸ್ಟುಡೆಂಟ್ ಹೋಮ್, ಶಿರಸಿ, ಲಯನ್ಸ್ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶಶಾಂಕ್ ಹೆಗಡೆ ರವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲಾ 6 ತಾಲೂಕಿನ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಪಾಲಕ ಪೋಷಕರು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಕಾರ್ಕಳದ ಪಿ ಆರ್ ಓ ಲಿಶಾನ್ ಗೌಡ ಮತ್ತಿತರರು ಪಾಲ್ಗೊಂಡಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page