
ಮಂಗಳೂರು: ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಪ್ರಧಾನ ಸಂಪಾದಕ ಶಶಿ ಆರ್ ಬಂಡಿಮಾರ್ (41) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಟೈಮ್ಸ್ ಆಫ್ ಕುಡ್ಲ ತುಳು ವಾರ್ತಾಪತ್ರಿಕೆಯನ್ನು ಹದಿನೈದು ವರ್ಷಗಳಿಂದ ನಡೆಸಿಕೊಂಡು ಬಂದಿರುವ,ಇವರು ಕೆಲಸದ ನಿಮಿತ್ತ ನಾಗಾಲ್ಯಾಂಡ್ ಗೆ ತೆರಳಿದ್ದ ಸಂದರ್ಭ ಆರೋಗ್ಯದಲ್ಲಿ ಏರುಪೇರಾಗಿದ್ದು, ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರ ಅಂತಿಮಸಂಸ್ಕಾರದ ವಿಧಿ ವಿಧಾನಗಳು ಜ. 31 ಶುಕ್ರವಾರ ಹುಟ್ಟೂರಿನಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.





















