
ಉಡುಪಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು ಯಾತ್ರಾ ಸ್ಥಳ ತಿರುಪತಿ ಹಾಗೂ ಹೈದರಾಬಾದ್ ಗೆ ಕಾರವಾರದಿಂದ ಕುಂದಾಪುರ- -ಉಡುಪಿ-ಮಂಗಳೂರು ಮೂಲಕ ರೈಲು ಸಂಪರ್ಕ ಕಲ್ಪಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮೊದಲು ಕೊಂಕಣ ರೈಲ್ವೆ ಆಡಳಿತ ನಿರ್ದೇಶಕರು ಹಾಗೂ ನೈರುತ್ಯ ರೈಲ್ವೆ ಅಧಿಕಾರಿಗಳ ಜೊತೆ ಚರ್ಚಿಸಿದ ಸಂಸದರು ಬಳಿಕ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ರೈಲ್ವೆ ಸಚಿವಾಲಯವು ಸಂಸದರ ಮನವಿಗೆ ಸೂಕ್ತ ಸ್ಪಂದನೆ ನೀಡಿದ್ದು ಕರಾವಳಿ ಕರ್ನಾಟಕವನ್ನು ತಿರುಪತಿ ಹೈದರಾಬಾದ್ ಜೊತೆ ಜೋಡಿಸಲು ರೈಲು ಸೇವೆ ಆರಂಭಿಸುವುದಾಗಿ ಭರವಸೆ ನೀಡಿದೆ.













