29.1 C
Udupi
Saturday, May 23, 2026
spot_img
spot_img
HomeBlogಮೇ 25.ಹೆಬ್ರಿ ತಾಲೂಕು ಕಚೇರಿ ಕಡತ ವಿಲೇವಾರಿ ಅಸಹಕಾರ ಮತ್ತು ವಿಳಂಬ ನೀತಿ ವಿರೋಧಿಸಿ "ಬೃಹತ್...

ಮೇ 25.ಹೆಬ್ರಿ ತಾಲೂಕು ಕಚೇರಿ ಕಡತ ವಿಲೇವಾರಿ ಅಸಹಕಾರ ಮತ್ತು ವಿಳಂಬ ನೀತಿ ವಿರೋಧಿಸಿ “ಬೃಹತ್ ಪ್ರತಿಭಟನೆ”

ರಾಜ್ಯ ಸರಕಾರದ ಯೋಜನೆಗಳು ಅನುಷ್ಠಾನ ಆಗದೆ ಜನ ಸಾಮಾನ್ಯರಿಗೆ ಆಗುತ್ತಿರುವ ಈ ಎಲ್ಲಾ ಸಮಸ್ಯೆಗಳ ವಿರುದ್ಧ ದಿ| ಗೋಪಾಲ ಭಂಡಾರಿ ಅಭಿಮಾನಿ ಬಳಗ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ (ರಿ.) ಹೆಬ್ರಿ ಇವರುಗಳು ಕರೆ ನೀಡಿರುವ ಬೃಹತ್ ಪ್ರತಿಭಟನೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೆಬ್ರಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್ ಹಾಗು ಬಿಜೆಪಿ ಕಾರ್ಕಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ ಶೆಟ್ಟಿ ಶಿವಪುರ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಸರಕಾರ ಆಡಳಿತಕ್ಕೆ ಬಂದ ಬಳಿಕ ಕುರ್ಚಿ ಗಲಾಟೆಯಲ್ಲಿಯೇ ಕಾಲ ಕಳೆಯುತ್ತಿದ್ದು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ಜನ ಹೈರಾಣರಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಯೋಜನೆಗಳು ಕೇವಲ ಘೋಷಣೆಗೆ ಸೀಮಿತವಾಗಿದೆ ಹೊರತು ಯಾವುದೂ ಕೂಡ ಕಾರ್ಯ ರೂಪಕ್ಕೆ ಬರುತ್ತಿಲ್ಲ.

94 ಸಿ ಅರ್ಜಿ, ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಅಸಹಕಾರ ಮತ್ತು ವಿಳಂಬ, ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ನಡೆಸುವಲ್ಲಿ ವಿಳಂಬ ಇವೆಲ್ಲವನ್ನು ಕಾರ್ಕಳ ಶಾಸಕರು ಕೆಡಿಪಿ ಸಭೆಗಳಲ್ಲಿ ಪ್ರಸ್ತಾವಿಸಿದ್ದರೂ ಯಾವುದೇ ಬದಲಾವಣೆಯಾಗಲಿಲ್ಲ, ಅದಲ್ಲದೆ ಶಾಸಕರು ತಾಲೂಕು ಮಟ್ಟದಲ್ಲಿ ಪರಿಶೀಲನಾ ಸಭೆಗಳನ್ನು ಕರೆದು ಜನರ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಯಾವುದೇ ಸುಧಾರಣೆಗಳು ಕಾಣುತ್ತಿಲ್ಲ, ಈ ಸರ್ಕಾರದ ನಿರಂಕುಶ ಆಡಳಿತದಲ್ಲಿ ಸರ್ಕಾರಿ ಕಚೇರಿಗಳು ಸಂಪೂರ್ಣ ಜಡ ಸ್ಥಿತಿ ತಲುಪಿದ್ದು, ಈ ನಿರ್ಜೀವ ಸರ್ಕಾರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ.

ರಾಜ್ಯ ಸರ್ಕಾರದ ದಿವಾಳಿತನದ ಬಿಸಿ ಈಗ ಸಾಮಾನ್ಯ ಜನರ ಜೀವನಕ್ಕೂ ತಟ್ಟಿದೆ, ಈ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಂತೂ ಪ್ರಚಾರದ ವಸ್ತುಗಳಾಗಿ, ಕೇವಲ ಜಾಹಿರಾತುಗಳಿಗೆ ಸೀಮಿತವಾಗಿ ಬಿಟ್ಟಿವೆ. ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತಿತರ ಮಾಸಿಕ ಪಿಂಚಣಿಗಳು ಸಹಾ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂದು ಜನರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page