33.4 C
Udupi
Tuesday, April 21, 2026
spot_img
spot_img
HomeBlogಮಗ ತನ್ನಂತೆ ಹೋಲಿಕೆ ಇಲ್ಲ ಎಂದು ನದಿಗೆ ತಳ್ಳಿ ಹತ್ಯೆ ಮಾಡಿದ ತಂದೆ..!

ಮಗ ತನ್ನಂತೆ ಹೋಲಿಕೆ ಇಲ್ಲ ಎಂದು ನದಿಗೆ ತಳ್ಳಿ ಹತ್ಯೆ ಮಾಡಿದ ತಂದೆ..!

ವಿಜಯಪುರ: ತಾಲೂಕಿನ ನಾಗಠಾಣದಲ್ಲಿ ಆಘಾತಕಾರಿ ದುರ್ಘಟನೆ ಎಂದು ನಡೆದಿದ್ದು ಅದೇನೆಂದರೆ ತನ್ನಂತೆ ಹೋಲಿಕೆಯಲ್ಲಿ ಇಲ್ಲ ಎಂದು ತಂದೆಯೇ ಮಗನನ್ನು ನದಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ತಂದೆ ಮಲ್ಲಿಕಾರ್ಜುನ ಅರಕೇರಿ ಎಂಬಾತ ತನ್ನ ಮಗ ಸಿದ್ಧಾರ್ಥ ಮಲ್ಲಿಕಾರ್ಜುನ ಅರಕೇರಿ (6) ಯನ್ನು ಟ್ಯೂಶನ್‌ಗಾಗಿ ಹಾಸ್ಟೆಲ್‌ಗೆ ಸೇರಿಸುವುದಾಗಿ ಕರೆದೊಯ್ದು ಕೃಷ್ಣಾನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ.

ತನ್ನ ಮಗ ತನ್ನಂತೆ ಹೋಲಿಕೆ ಇಲ್ಲವೆಂದು ಪತ್ನಿಯ ಮೇಲೆ ಅನುಮಾನಿಸಿ ಜಗಳವಾಡುತ್ತಿದ್ದ. ಇದೇ ವಿಚಾರಕ್ಕೆ ಗ್ರಾಮದ ಕೆಲ ಕಿಡಿಗೇಡಿಗಳು ಛೇಡಿಸಿದ್ದರು. ಇದರಿಂದ ರೋಸಿದ ಮಲ್ಲಿಕಾರ್ಜುನ ಮಾ.16ರಂದು ಸಿಂದಗಿ ಬಳಿ ವಸತಿ ಶಾಲೆಯಲ್ಲಿ ಕೋಚಿಂಗ್‌ಗೆ ಸೇರಿಸುವುದಾಗಿ ಹೆಂಡತಿಗೆ ಸುಳ್ಳು ಹೇಳಿ ಸಿದ್ಧಾರ್ಥನನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಮಹಾರಾಷ್ಟ್ರ ಗಡಿಯ ಕೃಷ್ಣಾನದಿ ಬಳಿ ಕರೆದೊಯ್ದು ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ.

ಪತ್ನಿ ಏ.1ರಂದು ಮಗನ ಹುಟ್ಟುಹಬ್ಬಕ್ಕೆ ಆತನನ್ನು ಹಾಸ್ಟೆಲ್ನಿಂದ ಕರೆತರುವಂತೆ ಪಟ್ಟು ಹಿಡಿದಾಗ ಮಲ್ಲಿಕಾರ್ಜುನ ಮನೆ ಬಿಟ್ಟು ಪರಾರಿಯಾಗಿದ್ದಾ‌ನೆ. ಅನುಮಾನಗೊಂಡ ಪತ್ನಿ ಭಾಗ್ಯಶ್ರೀ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಮಲ್ಲಿಕಾರ್ಜುನನನ್ನು ಹುಡುಕಿ ವಿಚಾರಿಸಿದಾಗ ಪ್ರಕರಣ ಬಯಲಾಗಿದೆ. ಮಹಾರಾಷ್ಟ್ರದಲ್ಲಿ ಬಾಲಕನ ಶವ ಪತ್ತೆಯಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page