27.4 C
Udupi
Friday, April 24, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ- 8)

ಚೇತನ್ ವರ್ಕಾಡಿ

ಕತ್ತಲು ತುಂಬಿದ ಆ ಕೋಣೆಯೊಳಗೆ ಮಂಗಳ ಸರಿಯಾಗಿ ಗೋಚರಿಸುತ್ತಿರಲಿಲ್ಲ.ಕೋಣೆಯ ಮೂಲೆಯಿಂದ ಅವಳ ಧ್ವನಿ ಮಾತ್ರ ಕೇಳುತ್ತಿತ್ತು. ಒಳಗೆ ಬಂದ ಯಶೋಧ ಪಕ್ಕನೆ ದೀಪ ಬೆಳಗಿಸಿ ಏನಾಯ್ತಮ್ಮ ಮಂಗಳ ಎಂದು ಕೇಳುವಷ್ಟರಲ್ಲಿ ಅಲ್ಲೇ ಅವಿತಿದ್ದ ಜಿರಳೆಯೊಂದು ಗೋಡೆಯ ಕಡೆಗೆ ಹಾರಿ ಹೋಯಿತು.ಇದನ್ನು ನೋಡಿದ ರಾಘವ ಏನಮ್ಮ ಮಂಗಳ ಇಷ್ಟು ಚಿಕ್ಕ ಜಿರಳೆಯನ್ನು ನೋಡಿ ಇಷ್ಟೊಂದು ಬೊಬ್ಬೆ ಹೊಡಿಬೇಕ!ನಿನ್ನ ಬೊಬ್ಬೆ ಕೇಳಿ ನಮ್ ಪ್ರಾಣಾನೆ ಹೋಗೊ ತರ ಆಗಿತ್ತು ಕಂದ ಎಂದು ಹತ್ತಿರ ಹೋಗಿ ಮಗಳ ತಲೆ ಸವರುತ್ತಾ ಹೇಳಿದಾಗ ಮಂಗಳ ಮೆಲ್ಲ ಓರೆಕಣ್ಣಿನಿಂದ ತಂದೆಯನ್ನು ನೋಡುತ್ತಾ ಹಾಗೆ ಅವನ ಭುಜಕ್ಕೆ ಎರಗಿ ಅವನ ವಾತ್ಸಲ್ಯದ ಅಪ್ಪುಗೆಯಿಂದ ಹೆದರಿಬಿಟ್ಟಿದ್ದ ಅವಳು ಹಾಗೆ ಸುಧಾರಿಸುತ್ತಿದ್ದಳು.ಸಾಕು ಸಾಕು ತಂದೆ ಮಗಳ ವಾತ್ಸಲ್ಯ‌ವನ್ನು ನೋಡಿದ ಯಶೋಧ!ರೀ ಹೇಗೂ ಧಣಿದು ಬಂದಿದ್ದೀರ ಬಿಸಿ ಬಿಸಿ ನೀರು ಕಾಯಿಸಿಟ್ಟಿದ್ದೀನಿ ಹೋಗಿ ಸ್ನಾನ ಮಾಡ್ಕೊಂಡು ಬನ್ನಿ!ಹೋಗಮ್ಮ ಮಂಗಳ ಅಪ್ಪನಿಗೆ ಬೈರಾಸ್ ಕೊಡು ಎಂದಾಗ!ತಾಯಿ ಮಾತಿಗೆ ಓಗೊಟ್ಟ ಮಂಗಳ ಆಯ್ತು ಅಮ್ಮ ಎಂದು ಹೇಳಿ ಒಳಗಿನ ರೂಂ ಕಡೆ ಹೆಜ್ಜೆಯಿಟ್ಟಳು.ರಾಘವ ಮತ್ತು ಯಶೋಧ ಮಗಳನ್ನೇ ನೋಡುತ್ತಾ ಅಕ್ಕರೆಯ ನಗು ಬೀರಿದರು…
ಮಧು ಸೌಂಧರ್ಯಳನ್ನು ನೋಡಿಹೋಗಿ ಒಂದು ವಾರ ಕಳೆಯಿತು ಇನ್ನೂ ನಿರ್ಧಾರವನ್ನೆ ತಿಳಿಸಲಿಲ್ಲ.ಸೌಂದರ್ಯ‌ಳಿಗೆ ಮಧು ತುಂಬಾ ಇಷ್ಟ ಆಗಿದ್ದ ತಾನು ಮದುವೆಯಾಗೊದಿದ್ದರೆ ಅವನನ್ನೆ ಅವನನ್ನು ಬಿಟ್ಟು ಬೇರೆ ಯಾರನ್ನು ಮದುವೆಯಾಗೊಲ್ಲ ಎಂದು ಹಠ ಹಿಡಿದು ಕುಳಿತಿದ್ದಾಳೆ ಸೌಂಧರ್ಯ…
ಅದು ಬೆಳಿಗ್ಗಿನ ಸಮಯ ಮಧು ತನ್ನ ಕಂಪೆನಿ ಕಡೆ ಹೊರಡಲು ರೆಡಿಯಾಗುತ್ತಿದ್ದರೆ !ಜೇಬಿನಲ್ಲಿದ್ದ ಮೊಬೈಲ್ ರಿಂಗಾಗತೊಡಗಿತು.ಕೂಡಲೆ ತೆಗೆದು ನೋಡಿದ ಮಧುವಿಗೆ ಆ ಹೊಸನಂಬರ್ ನೋಡಿ ಅದೇಕೊ ಮನಸು ರಿಸಿವ್ ಮಾಡಬೇಡ ಅನ್ನುತ್ತಿತ್ತು.ಆದರೂ ಅರ್ಜೆಂಟ್ ಯಾರಾದರೂ ಕಾಲ್‌ಮಾಡಿರ್ಬಹುದು ಎಂದು ರಿಸೀವ್ ಮಾಡಿಯೆ ಬಿಟ್ಟ.ಹಲೋ ಮಧು ಮಾತನಾಡುತ್ತಿದ್ದೇನೆ ಯಾರು ಹೇಳಿ ಎಂದು ಕೇಳಬೇಕೆನ್ನುವಷ್ಟರಲ್ಲಿ……

(ಮುಂದುವರಿಯುವುದು)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page