ಕಥೆ (ಭಾಗ- 5)
ಚೇತನ್ ವರ್ಕಾಡಿ

ಅವಳ ಸೌಂದರ್ಯಕಿಂತಲೂ ಬಂಗಾರವೆ ಅವಳನ್ನು ಮೈತುಂಬಾ ತುಂಬಿಕೊಂಡಿತು.ಮಧು ಅವನ ತಂದೆ ತಾಯಿ ಒಂದು ಸೋಪಾದಲ್ಲಿ ಕುಳಿತಿದ್ದರೆ!ಸುಂದರರಾಯರು ಅವರ ಕುಟುಂಬದವರು ಒಂದು ಕಡೆಯಲ್ಲಿ ಆಸೀನರಾಗಿದ್ದರು.ದೂರದಿಂದಲೇ ಬರುತ್ತಿದ್ದ ಸೌಂಧರ್ಯಳನ್ನು ನೋಡಿದ ಸುಗಂಧಿ ಮಗನತ್ತ ತಿರುಗಿ ಲೋ ಮಧು ಅಲ್ನೋಡೊ ಹುಡುಗಿ ಬರ್ತಿದ್ದಾಳೆ ನಿನ್ಗೆ ಹೇಳಿಮಾಡಿಸಿದ ಜೋಡಿತರ ಇದೆ ಕಾಣೊ ಎಂದು ಹೇಳಿದರು ಏನೋ ಆಲೋಚನೆಯಲ್ಲಿದ್ದಂತಿದ್ದ ಮಧು ತಾಯ ಮಾತಿಗೆ ಸುಮ್ನೆ ಹೌದು ಮಮ್ಮಿ ಎಂದಷ್ಟೇ ಹೇಳಿ ಮುಗಿಸಿದ.ಸೌಂಧರ್ಯ ಎಲ್ಲರಿಗೂ ಜ್ಯೂಸ್ ಕೊಟ್ಟು ಮಧುವಿಗೆ ಕೊಡೊದಕ್ಕಾಗಿ ಅವನ ಪಕ್ಕ ಬಂದರೆ ಮಧು ಯಾವುದೆ ರೆಸ್ಪೋನ್ಸ್ ಕೊಡದೆ ಹಾಗೆ ತೆಗೆದು ಕುಡಿದೆ ಬಿಟ್ಟ.ಸೌಂಧರ್ಯ ಅಷ್ಟು ಹೊತ್ತು ಮಧುವಿಗಾಗಿ ಕಾದಿದ್ದ ಸಮಯವೆಲ್ಲ ವ್ಯರ್ಥ ಅನ್ನೊ ತರ ಇತ್ತು.ಸೌಂಧರ್ಯ ಅಲ್ಲಿಂದ ಒಳಹೋದಳು.ಸೋಮಶೇಖರರಾಯರು ಮಗನನ್ನು ಹೊರಕರೆದು ಏನೊ ಮಧು ಹುಡುಗಿ ಒಪ್ಪಿಗೆ ಅಲ್ವ ಎಂದು ಕೇಳಿದಾಗ…………… ಡ್ಯಾಡಿ ಓ ಕೆ ಆದ್ರೆ ಇವಾಗ್ಲೆ ಕನಫರ್ಮ್ ಆಗಿ ಏನು ಹೇಳೊಕಾಗಲ್ಲ ಡ್ಯಾಡಿ ನನ್ಗೆ ಸ್ವಲ್ಪ ಕಾಲಾವಕಾಶ ಕೊಡಿ ಇದು ನನ್ ಲೈಫ್ ಪ್ರಶ್ನೆ ಅಲ್ವ ಎಂದು ಹೇಳಿದಾಗ ಮಗನ ಮತೆಲ್ಲವೂ ತಂದೆಗೆ ಆಶ್ಚರ್ಯಕರವಾಗಿ ಕಾಣತೊಡಗಿತು.ಆದರೂ ಮಗನ ಮೇಲಿದ್ದ ಪ್ರೀತಿಯಿಂದ ಆಯ್ತು ಕಣೊ ನಿಧಾನವಾಗಿ ಆಲೋಚಿಸಿ ಹೇಳು ಎಂದು ಮಗನಲ್ಲಿ ಹೇಳುತ್ತಾ ಸ್ಪಷ್ಟವಾದ ಒಪ್ಪಿಗೆ ನೀಡದೆ ಒಂದು ವಾರದೊಳಗೆ ತಿಳಿಸ್ತೀವಿ ಎಂದು ಹೇಳಿ ಅಲ್ಲಿಂದ ಹೊರಟೇ ಬಿಟ್ಟರು.ಕಾರಿನ ಹಿಂಬದಿಯಲ್ಲಿ ಕುಳಿತ ಸುಗಂಧಿ ಮಧುವಿನ ಕಡೆ ನೋಡುತ್ತ ಅಲ್ಲ ಕಣೊ ಏನಾಗಿದೆಯೊ ನಿನ್ಗೆ ಬೆಳಿಗ್ಗೆ ಮನೆಯಿಂದ ಹೊರಡುವಾಗ ಅಷ್ಟು ಖುಷಿ ಖುಷಿಯಿಂದ ಹೊರಟೆ ಅಷ್ಟು ಮುದ್ದಾಗಿ ಇರೊ ಹುಡ್ಗಿ ನಮ್ ಸ್ಟೇಟಸ್‌ಗ್ ತಕ್ಕವಳೆ ಅಲ್ಲೆ ಒಪ್ಪಿಗೆ ನೀಡೊದು ಬಿಟ್ಟು ನಿನ್ಗೆ ಯಾಕೊ ಒಂದು ವಾರ ಎಂದು ಕೇಳುತ್ತಿದ್ದಂತೆಯೆ ಮಮ್ಮಿ ಅದು ಎಂದು ಉತ್ತರಿಸಬೇಕಾದರೆ ಅದೇ ದಾರಿಯಲ್ಲಿ ದೂರದಿಂದ ಮತ್ತೆ……
(ಮುಂದುವರಿಯುವುದು)













