ಕಥೆ (ಭಾಗ- 24)
ಚೇತನ್ ವರ್ಕಾಡಿ

ತಂದೆಯ ಅಳು ಮಗಳಿಗೆ ಅದೇನೊ ಮುನ್ಸೂಚನೆಯನ್ನು ತಿಳಿಸಿದಂತಿತ್ತು.ತಾನೆ ತಾಯಿಯಾಗಿ ತಂದೆಯನ್ನು ಸಮಧಾನ ಪಡಿಸಿದಳು ಮಂಗಳ.ಸ್ವಲ್ಪ ದಿನ ಈಗೆ ಕಳೆದುಹೋಯಿತು..ಮಧುವಿನ ಚಲನವಲನದಲ್ಲಿ ಬದಲಾವಣೆ ಇಲ್ಲ.ಹೆತ್ತವರು ನೀಡದ ಪೂಜೆ ಪುರಸ್ಕಾರಗಳಿಲ್ಲ ಏನೇ ಮಾಡಿದರೂ ಮಧುವಿನ ನಗುಮುಖ ಕಾಣಲು ಸಾಧ್ಯವೆ ಆಗಲಿಲ್ಲ.
ಇತ್ತ ಸೌಂಧರ್ಯಳಿಗೂ ಮಧುವಿನ ಮೇಲಿದ್ದ ಪ್ರೀತಿ ಕಡಿಮೆಯಾಗತೊಡಗಿತು.ಸುಂದರರಾಯರು ಮಧುವಿನ ಬಗ್ಗೆ ಬೇಸರ ವ್ಯಕ್ತ ಪಡಿಸಿದರೆ ಮಗಳಿಗೇನೊ ಯಾರೊ ಅನ್ನ ತರ ಮಖದ ಭಾವನೆಗಳು ವ್ಯಕ್ತವಾಗುತ್ತಿತ್ತು.ಮಧುವಿಲ್ಲದೆ ಜೀವನವೇ ಇಲ್ಲ ಎಂದವಳು ಆಸ್ಪತ್ರೆಯಿಂದ ಬಂದ ನಂತರ ಅತ್ತ ಮುಖಮಾಡಿಯೂ ನೋಡಿದವಳಲ್ಲ.ಸುಂದರರಾಯರು ಒಂದೆರಡು ಬಾರಿ ಹೋಗಿ ಸಮಧಾನ ಪಡಿಸಿದ್ದೂ ಉಂಟು.
ಸುಗಂಧಿಗೂ ಮನೆಕೆಲಸ ಮಧುವಿನ ಚಾಕಿರಿ ಅಂತ ಒಬ್ಬಳಿಗೆ ಓಡಾಡಿ ದುಡಿಯೋಕೆ ಕಷ್ಟವಾದಾಗ ಮನೆಗೆ ಹೊಂದಿಕೊಳ್ಳುವ ಹಳ್ಳಿ ಹುಡುಗಿಯೊಬ್ಬಳನ್ನು ಕೆಲಸಕ್ಕೆ ಇಟ್ಟರೆ ಹೇಗೆಂದು ಮಾತನಾಡಬೇಕಾದರೆ ಪೋನ್ ರಿಂಗಾಗತೊಡಗಿತು…..?
ಪೋನ್ ಮಾಡಿದವರು ಯಾರು ಅಲ್ಲ ಮಧುವಿನ ಆಪ್ತಮಿತ್ರ ಮಿಥುನ್.ತನ್ನ ಮಗನಂತೆ ಇದ್ದ ಮಿಥುನ್‌ನಲ್ಲಿ ಸುಗಂಧಿ ತನ್ನ ನೋವನ್ನು ತೋರ್ಪಡಿಸಿದಾಗ!ತಾಯಿ ಮಾತಿಗೆ ಒಪ್ಪಿಗೆ ನೀಡಿದ ಮಿಥುನ್ !ಮಧುವನ್ನು ಆ ಮನೆಯನ್ನು ನೋಡೊ ಒಳ್ಳೆ ಕೆಲಸದಾಕೆ ಯಾರು ಆಲೋಚಿಸುವಾಗಲೆ ಕೂಡಲೆ ನೆನಪಿಗೆ ಬಂದವಳು ಹಳ್ಳಿ ಹುಡುಗಿ ಮಂಗಳ….
ಆದರೂ ಮನದಲ್ಲಿ ಆಲೋಚನೆ ತಾನು ಹುಡುಗಿಯನ್ನು ನೋಡಿಬಂದ ಮೇಲೆ ಆ ಕಡೆ ಯಾವ ವಿಚಾರವನ್ನು ತಿಳಿಸಿಯೂ ಇಲ್ಲ,ನಿಶ್ಚಿತಾರ್ಥದ ಬಗ್ಗೆ ಮಾತನಾಡಿಯೂ ಇಲ್ಲ ಒಂದು ವೇಳೆ ಮಂಗಳಳಿಗೆ ಬೇರೆ ಗಂಡು ನೋಡಿರಬಹುದೆ!ಏನೆ ಆಗಲಿ ಕೊಟ್ಟ ನಂಬರ್ ಕೈಯಲ್ಲಿತ್ತು ಮಂಗಳ ನನಗೆ ಸಿಗುವಂತಿದ್ದರೆ ದೇವರಿಗೂ ಅದನ್ನು ತಪ್ಪಿಸೋಕಾಗಲ್ಲ!ಮಧು ಸ್ವಲ್ಪ ಸುಧಾರಿಸೊ ತನಕ ಸಿಟಿಯಲ್ಲಿದ್ದರೆ ಹಳ್ಳಿಹುಡುಗಿಯೂ ಬದಲಾಗುತ್ತಲೆ ಅಲ್ಲದೆ ಅವಳ ಗುಣನಡತೆಯೂ ತಿಳಿಯುತ್ತದೆ ಎಂದು ಹಲವಾರು ಮುಂದಾಲೋಚನೆಯೊಂದಿಗೆ ಮೊಬೈಲ್‌ನಲ್ಲಿದ್ದ ರಾಘವನ ನಂಬರ್‌ಗೆ ಕರೆ ಮಾಡಿದಾಗ ಪೋನ್ ರಿಂಗಾಗತೊಡಗಿತು….
ಪೋನ್ ರಿಸಿವ್ ಮಾಡಿದವರು ರಾಘವ ಆಗಿರಲಿಲ್ಲ…..?
(ಮುಂದುವರಿಯುವುದು)































































































































