ಕಥೆ (ಭಾಗ- 11)
ಚೇತನ್ ವರ್ಕಾಡಿ

ಮಂಗಳ ಜಗಲಿಯಿಂದ ಎದ್ದವಳೆ ನೇರ ಮನೆಯೊಳಗೆ ಹೊರಟೇ ಬಿಟ್ಟಳು.ಯಶೋಧಳಿಗೆ ಗಂಡನ ಮಾತನ್ನು ಕೇಳಿ ತುಂಬಾ ಸಂತೋಷವಾಯಿತು.ಓ ಹೌದೇನ್ರಿ ಹುಡುಗ ಏನ್ ಮಾಡ್ಕೊಂಡಿದ್ದಾನೆ ನಮ್ ಮುದ್ದು ಮಗಳನ್ನ ಚೆನ್ನಾಗಿ ನೋಡುಕೊಳ್ಳುವಂತ ಹುಡುಗನನ್ನೆ ಹುಡುಕಿದ್ರಿ ಅಲ್ವ ಹೀಗೆ ಹಲವಾರು ಪ್ರಶ್ನೆಗಳನ್ನು ಒಮ್ಮೆಲೆ ಗಂಡನ ಮುಂದಿಟ್ಟಾಗ!ಅಲ್ಲ ಕಣೆ ನಾನು ಮದುವೆ ಅಂದುಕೂಡ್ಲೆ ನಮ್ ಪಾಪು ಯಾಕೆ ಸೀದಾ ಒಳಗಡೆ ಹೋದಳು ನಾನು ಅದೇ ಆಲೋಚಿಸುತ್ತಿದ್ರೆ ನೀನು ನೂರಾರು ಪ್ರಶ್ನೆಯನ್ನು ಒಮ್ಮೆಲೆ ಬಿಚ್ಚಿಟ್ಟೆ.ಅಲ್ಲ ಕಣೆ ಯಶೋದ ನನ್ನ ಆತ್ಮೀಯ ಗೆಳೆಯನ ಮಗ ಅಂದ್ಮೇಲೆ ಅವನು ನಮ್ ಮಗಳನ್ನು ಚೆನ್ನಾಗಿ ನೋಡ್ಲೆ ಬೇಕಲ್ವ!ಅದಕ್ಕಿಂತ ಮೊದಲು ನಮ್ ಮಗಳಿಗೆ ಹುಡುಗ ಒಪ್ಪಿಗೆ ಆಗ್ಬೇಕು ಮೊದಲು ನನ್ ಗೆಳೆಯನಲ್ಲಿ ಮಾತಾಡಿ ಒಂದು ದಿನ ನೋಡಿ ಹುಡುಗನನ್ನು ನಮ್ಮ ಮನೆಗೆ ಕರೆಸ್ತೀನಿ ಆಮೇಲೆ ಮುಂದಿನ ಕಾರ್ಯ!ಇವಾಗ ಈ ಹಪ್ಪಳದ ಕೆಲಸ ಮುಗಿಯಲಿ ಎಂದವನೆ ಮತ್ತೆ ಇಬ್ಬರೂ ಕೆಲಸದಲ್ಲಿ ತಲ್ಲೀಣರಾದರು..
ಮಧುವಿನ ಮನದೊಳಗೆ ಮಂಗಳಳ ಮುಖ ಕೇಶಸೌಂಧರ್ಯವೆ ಅಚ್ಚೊತ್ತಿ ಹೋಗಿದೆ ಮನೆ ಆಫೀಸ್ ಎಲ್ಲಿ ಹೋದರು ಬರೀ ಅವಳ ಆ ನಗುಮುಖದ ಮಾತುಗಳು ಎಲ್ಲವೂ ಎದುರಿಗೆ ಬಂದು ಪ್ರೇಮಲೋಕದಲ್ಲಿ ಹಾರಡಾಲು ಬೀಸಿ ಕರೆಯುವಂತಿದೆ.ಇತ್ತ ಸೌಂದರ್ಯ ಮಧುವನ್ನು ಬಿಟ್ಟು ಬೇರೆ ಯಾರನ್ನು ಮದುವೆಯಾಗಲಾರೆ ಎಂದು ಹಟಕ್ಕೆ ಬಿದ್ದಿದ್ದಾಳೆ.ಸೋಮಶೇಖರರಾಯರಿಗೂ ಸೌಂಧರ್ಯಳನ್ನೆ ಸೊಸೆಯಾಗಿ ಮನೆತುಂಬಿಸಿಕೊಳ್ಬೇಕು ಅನ್ನೊ ಆತುರ.ತಾನು ಬಯಸಿದನ್ನು ಸಿಗುವವರೆಗೆ ಬಿಡದ ಹಠವಾದಿ ಸೌಂಧರ್ಯ ಆದರೆ ಇಲ್ಲದಿದ್ದರೂ ಕೊಟ್ಟುಬಿಡುವ ತುಂಬು ಮನಸಿನ ಶ್ರೀಮಂತ ಹೃದಯದವಳು ಮಂಗಳ.ಬಡತನ ಸಿರಿತನ ಏನೆ ಇರಲಿ ಗುಣನಡತೆಯನ್ನೆ ಪೂಜಿಸುವವನು ನಮ್ಮ ಮಧು…
ವಾರ ಕಳೆದು ತಿಂಗಳುಗಳಾದರೂ ಮಧುವಿನ ಕಡೆಯಿಂದ ಗ್ರೀನ್ ಸಿಗ್ನಲ್ ಬಾರದ ಕಾರಣ ಹುಚ್ಚಿಯಂತಾದ ಸೌಂಧರ್ಯ ತಾನೆ ಮಧುವಿನ ಆಫೀಸ್‌ನ ಕಡೆ ತನ್ನ ಕಾರಿನಲ್ಲಿ ಪ್ರಯಾಣ ಬೆಳೆಸಿದಳು.ಮನೆಯಿಂದ ಹೊರಟ ಕಾರು ಆಫೀಸಿಗು ಬಂದು ಮುಟ್ಟಿತು.ಬಂದವಳೆ ಮಧುವಿನ ಚೇಂಬರ್ ಒಳಗಡೆ ಪ್ರವೇಶಿಸಿಯೆ ಬಿಟ್ಟಳು.ಸೌಂಧರ್ಯಳನ್ನು ನೋಡಿದ ತಕ್ಷಣ ಒಂದು ಕ್ಷಣ…..
(ಮುಂದುವರಿಯುವುದು)































































































































