ಬಂಧನಕ್ಕೆ ಒಳಗಾಗಿದ್ದ ಅರಣ್ಯಾಧಿಕಾರಿ ಸಂಜೀವ ಪೂಜಾರಿಗೆ, ಜಾಮೀನು ಮಂಜೂರು….!

ಮಂಗಳೂರು: ಪುತ್ತೂರು ಉಪವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಅವರು ಬಿಲ್ಲವ ಹೆಣ್ಣು ಮಕ್ಕಳನ್ನು ಹಾಗೂ ಭಜನೆ ಸಂಕೀರ್ತನೆ ಮಾಡುವವರನ್ನು ನಿಂದಿಸಿರುವ ಆರೋಪದಡಿ ಬಂದಿತರಾಗಿದ್ದು ಇದೀಗ ಇಂದು ಸಂಜೆ ನ್ಯಾಯಾಲಯವು ಅವರಿಗೆ ಜಾಮೀನು ನೀಡಿರುವುದಾಗಿ ವರದಿಯಾಗಿದೆ.
ಸಂಜೀವ ಪೂಜಾರಿಯವರು ಮೂರು ದಿನಗಳ ಹಿಂದೆ ಕೇರಳ ರಾಜ್ಯದ ಮಂಜೇಶ್ವರದ ವ್ಯಕ್ತಿ ಒಬ್ಬರ ಜೊತೆ ಮಾತನಾಡಿದ್ದ ಫೋನ್ ಸಂಭಾಷಣೆ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಈ ಹಿನ್ನೆಲೆ ಹಿಂದೂ ಜಾಗರಣ ವೇದಿಕೆಯ ಸುಳ್ಯ ತಾಲೂಕು ಸಂಯೋಜಕ ಸಚಿನ್ ವಳಲಂಬೆ ಎಂಬವರು ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದು ಈ ದೂರು ಸ್ವೀಕರಿಸಿದ ಎರಡು ದಿನಗಳ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ಳಾರೆ ಪೊಲೀಸರು ಕಾಣೆಯೂರಿನ ನಿವಾಸದಿಂದ ಆರೋಪಿಯನ್ನು ವಶಕ್ಕೆ ಪಡೆದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಅವರಿಗೆ ಸುಳ್ಯದ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.













