
ನವದೆಹಲಿ: ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಸದ್ಯದಲ್ಲೇ 80 ಸಾವಿರದ ಗಡಿ ದಾಟುವ ಸಾಧ್ಯತೆಯಿದೆ. ಗುರುವಾರ 79,350 ರೂ.ಗಳಿದ್ದ 10 ಗ್ರಾಂ ಚಿನ್ನದ ಬೆಲೆ ಶುಕ್ರವಾರಕ್ಕೆ 550 ರೂ.ಗಳಷ್ಟು ಏರಿಕೆ ಕಂಡು, 79,900 ರೂ. ಮುಟ್ಟಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಚಿನ್ನ 78,970 ರೂ. ತಲುಪಿದ್ದು ಇದೇ ವೇಳೆ ನವದೆಹಲಿಯಲ್ಲಿ ಕೇಜಿ ಬೆಳ್ಳಿಯು ಸಾವಿರ ರೂ.ಗಳಷ್ಟು ಏರಿಕೆಯಾಗಿ 94,500 ರೂ. ಆಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರ 80000 ರೂ. ದಾಟಲು 100 ರೂ.ಬಾಕಿಯಿದೆ.













