33.1 C
Udupi
Sunday, April 26, 2026
spot_img
spot_img
HomeBlogಭಾಗಮತಿ ಎಕ್ಸ್ ಪ್ರೆಸ್ ರೈಲು ಅಪಘಾತ: ರೈಲ್ವೆ ಇಲಾಖೆಯಿಂದ ಸಹಾಯವಾಣಿ ಬಿಡುಗಡೆ

ಭಾಗಮತಿ ಎಕ್ಸ್ ಪ್ರೆಸ್ ರೈಲು ಅಪಘಾತ: ರೈಲ್ವೆ ಇಲಾಖೆಯಿಂದ ಸಹಾಯವಾಣಿ ಬಿಡುಗಡೆ

ಚೆನ್ನೈ: ಮೈಸೂರುನಿಂದ ದರ್ಭಾಂಗ್‌ಗೆ ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್‌ ರೈಲು ಚೆನ್ನೈ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದ್ದು, ಬೋಗಿಗಳು ಹೊತ್ತು ಉರಿದಿವೆ. ಅಪಘಾತದಲ್ಲಿ 10 ಮಂದಿಗೆ ಗಾಯವಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರು ಅಪಾಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಈ ವೇಳೆ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲಿನ ಕಿಟಕಿಗಳ ಮೂಲಕ ಕೆಲ ಪ್ರಯಾಣಿಕರು ಹೊರಬಂದಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ರೈಲಿನಲ್ಲಿ 900 ಪ್ರಯಾಣಿಕರು ಇರುವುದಾಗಿ ಅಂದಾಜಿಸಲಾಗಿದ್ದು, ಮೈಸೂರಿನ 180 ಜನ ಪ್ರಯಾಣಿಕರಿದ್ದರು ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ನಾಲ್ಕು ಎಸಿ ಕೋಚ್‌ಗಳಿಗೆ ಹಾನಿಯಾಗಿದ್ದು ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗವು ಸಹಾಯವಾಣಿ ನಂಬರ್ ಪ್ರಕಟಿಸಿದೆ.
ಚೆನ್ನೈ ವಿಭಾಗ: 04425354151, 0442435499
ಬೆಂಗಳೂರು ವಿಭಾಗ: 8861309815
ಮೈಸೂರು ವಿಭಾಗ: 9731143981

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page