
ಕಾರ್ಕಳ ಸೆ.08: ಬಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ.,3ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು 08-09-2024 ರಂದು ಸ್ವಾಗತ್ ಹೋಟೆಲ್, ಕಾರ್ಕಳದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷರಾದ ಉದಯ ಶೆಟ್ಟಿ ಮುನಿಯಾಲು ಇವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 31-03-2024ರ 13.11 %,ಠೇವಣಿ ಸಂಗ್ರಹಿಸಿ 12.16 ಕೋಟಿ ಸಾಲ ನೀಡಿ , 25.27 3 ವ್ಯವಹಾರವನ್ನು ನಡೆಸಿ, 67.60 ಕೋಟಿ ವಹಿವಾಟನ್ನು ಮಾಡಿ, 31.46 ಲಕ್ಷ ಲಾಭವನ್ನು ಗಳಿಸಿ, ದ್ವಿತೀಯಾ ವರ್ಷದಲ್ಲಿಯೇ ಶೇ.13 ಡಿವಿಡೆಂಡ್ ನೀಡಿರುವುದು ನಮ್ಮ ಸೊಸೈಟಿಯ ಹೆಮ್ಮೆ ಎಂದು ತಿಳಿಸಿದರು. ಈ ಅಭಿವೃದ್ಧಿಯಲ್ಲಿ ನಮ್ಮ ಸಂಘದ ಸದಸ್ಯರು, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಸೊಸೈಟಿಯು ಅಲ್ಪಾವಧಿಯಲ್ಲಿ ಹೆಚ್ಚಿನ ಅಭಿವೃದ್ಧಿಯೊಂದಲು ಸಾಧ್ಯವಾಯಿತು ಎಂದು ತಿಳಿಸಿದರು.
ಸೊಸೈಟಿಯ ಉಪಾಧ್ಯಕ್ಷರಾದ ಕೆ.ಮಂಜುನಾಥ ಶೆಟ್ಟಿ ಇವರು ಸಭೆಯಲ್ಲಿರುವ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು, ನಿರ್ದೇಶಕರಾದ ವಿನಯ ಅರುಣ್ ಶೆಟ್ಟಿ ಇವರು ಮಹಾಸಭೆಯ ನೋಟೀಸನ್ನು ಓದಿದರು. ನಿರ್ದೇಶಕರಾದ ಪ್ರಶಾಂತ್ ಶೆಟ್ಟಿ ಇವರು 2ನೇ ವಾರ್ಷಿಕ ಮಹಾಸಭೆಯ ನಡವಳಿಯನ್ನು ಮಂಡಿಸಿದರು, 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಮುಖ್ಯಕಾರ್ಯನಿರ್ವಣಾಧಿಕಾರಿಯಾದ ಕಿಶೋರ್ ಶೆಟ್ಟಿ ಇವರು ಮಂಡಿಸಿದರು, ನಿರ್ದೇಶಕರಾದ ಎಂ.ಪ್ರಸನ್ನ ಶೆಟ್ಟಿ ಇವರು 2023-24ನೇ ಸಾಲಿನ ಲೆಕ್ಕಪರಿಶೋಧಿತ ಲೆಕ್ಕಪತ್ರ ಮಂಡನೆ ಮಾಡಿದರು.
ನಿರ್ದೇಶಕರಾದ ಕೆ.ನವೀನ್ ಚಂದ್ರ ಶೆಟ್ಟಿ ಇವರು 2023-24ನೇ ಸಾಲಿನ ನೈಜ ಆಯ- ವ್ಯಯ ಪರಿಶೀಲನೆಯನ್ನು ಮಂಡಿಸಿದರು. ಪ್ರಧಾನ ವ್ಯವಸ್ಥಾಪಕರಾದ ಕೃಷ್ಣ ಎಂ. ಶೆಟ್ಟಿ ಇವರು 2023-24ನೇ ಸಾಲಿನ ಬಜೆಟಿಗಿಂತ ಜಾಸ್ತಿ ಖರ್ಚಾದ ಐವೇಜಿಗೆ ಮಂಡನೆ ಮತ್ತು 2024-25ನೇ ಸಾಲಿನ ಬಜೆಟನ್ನು ಮಂಡನೆ ಮಾಡಿದರು. ನಿರ್ದೇಶಕರಾದ ಎಂ.ಸುಧಾಕರ ಶೆಟ್ಟಿ ಇವರು ಸೊಸೈಟಿಯ ಉಪನಿಬಂಧನೆ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಓದಿ ಮಂಡಿಸಿದರು. ನಿರ್ದೇಶಕರಾದ ರಮೇಶ್ ಶೆಟ್ಟಿ ಇವರು ಲೆಕ್ಕ ಪರಿಶೋಧಕರು ವರದಿಯಲ್ಲಿ ಸೂಚಿಸಿರುವ ನ್ಯೂನತೆಗೆ ಅನುಪಾಲನ ವರದಿಯನ್ನು ಮಂಡಿಸಿದರು. ನಿರ್ದೇಶಕರಾದ ಸಚೀಂದ್ರ ಶೆಟ್ಟಿ ಇವರು 2023-24ನೇ ಸಾಲಿನ ನಿವ್ವಳ ಲಾಭದ ಹಂಚಿಕೆಯನ್ನು ಮಂಡಿಸಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಮಾಲಿನಿ ಎನ್.ರೈ ಮತ್ತು ಸುನಿತಾ ಎಸ್.ಶೆಟ್ಟಿ ಉಪಸ್ಥಿತರಿದ್ದು, ಸಭೆಯ ಪ್ರಾರಂಭದಲ್ಲಿ ಸೊಸೈಟಿಯ ಸದಸ್ಯರಾದ ರಶ್ಮಿ ಶೆಟ್ಟಿ ಇವರು ಪ್ರಾರ್ಥನೆಯನ್ನು ಮಾಡಿದರು ಮತ್ತು ನಿರ್ದೇಶಕರಾದ ಶ್ರೀ.ಪ್ರದೀಪ್ ಕುಮಾರ್ ಶೆಟ್ಟಿ ಇವರು ವಂದನಾರ್ಪನೆ ಮಾಡಿದರು. ಸಭಾಕಾರ್ಯಕ್ರಮದ ನಿರೂಪಣೆಯನ್ನು ಸೊಸೈಟಿಯ ಸದಸ್ಯರಾದ ಶ್ರೀ.ಬಾಲಕೃಷ್ಣಶೆಟ್ಟಿ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ 12 ಜನ ಆರ್ಥಿಕ ಹಿಂದುಳಿದ ಬಡ ಕುಟುಂಬದವರಿಗೆ ಹಾಗೂ ಸಹಾಯ ಧನವನ್ನು ನೀಡಿದರು ಮತ್ತು 14 ಪ್ರಗತಿಪರ ಕೃಷಿಕರಿಗೆ ಮತ್ತು ಸಾಧಕರಿಗೆ ಸನ್ಮಾನವನ್ನು ಮಾಡಿದರು













