
27 ವರ್ಷಗಳ ಬಳಿಕ ದೆಹಲಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ, ನೂತನ ಮುಖ್ಯಮಂತ್ರಿ ಆಯ್ಕೆಯ ಕುರಿತು ಇಂದು ಉನ್ನತ ಮಟ್ಟದ ಸಭೆ ಆಯೋಜಿಸಲಾಗಿದ್ದು, ಇದೀಗ ಸಭೆಯನ್ನು ಮುಂದೂಡಲಾಗಿದೆ.
ಮುಂದಿನ ಸಭೆ ಫೆಬ್ರವರಿ 19ರಂದು ನಡೆಯುವ ಸಾಧ್ಯತೆ ಇದ್ದು ಪ್ರಮಾಣವಚನ ಸ್ವೀಕಾರ ಫೆಬ್ರವರಿ 20ರಂದು ನಡೆಯಬಹುದು ಎನ್ನಲಾಗಿದೆ. ಇನ್ನು ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನಕ್ಕಾಗಿ ಹೊಸದಾಗಿ ಆಯ್ಕೆಯಾದ ಹಲವರು ಶಾಸಕರ ಹೆಸರುಗಳು ಚರ್ಚೆಯಾಗುತ್ತಿದ್ದು, ಪರ್ವೇಶ್ ವರ್ಮ, ದೆಹಲಿಯ ಬಿಜೆಪಿ ಮಾಜಿ ಅಧ್ಯಕ್ಷ ವಿಜೇಂದರ್ ಗುಪ್ತಾ, ಸತೀಶ್ ಉಪಾಧ್ಯಾಯ, ಪವನ್ ಶರ್ಮ ಆಶಿಶ್ ಸೂದ್ , ರೇಖಾ ಗುಪ್ತಾ ,ಶಿಖಾ ರೈ ಮುಂತಾದವರ ಹೆಸರುಗಳು ಕೇಳಿ ಬರುತ್ತಿದೆ.
ಬಿ.ಎಲ್ .ಸಂತೋಷ್ ಪಕ್ಷದ ಅಧಿಕಾರಿಗಳೊಂದಿಗೆ ತಡರಾತ್ರಿ ಸಭೆ ನಡೆಸಿದ್ದು ಬಿಜೆಪಿ ಅಧಿಕಾರಿಗಳ ಸಭೆಯಲ್ಲಿ ಪ್ರಮಾಣವಚನದ ದಿನಾಂಕದ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.













