
ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ, ಸೋಮೇಶ್ವರ ಚೆಕ್ ಪೋಸ್ಟ್ ಬಳಿಯಲ್ಲಿ ತಪಾಸಣೆ ಕರ್ತವ್ಯದಲ್ಲಿದ್ದ ಪೋಲಿಸರ ಮೇಲೆ ಸ್ಕಾರ್ಪಿಯೋ ವಾಹನವನ್ನು ಹತ್ತಿಸಿ ಕೊಲೆ ಯತ್ನ ನಡೆಸಿದ್ದಾರೆ
ಎನ್ನುವ ಆರೋಪದಡಿಯಲ್ಲಿ ಅಂದಿನ ವೃತ್ತ ನಿರೀಕ್ಷಕರಾದ ಹಾಲಮೂರ್ತಿ ರಾವ್ ಇವರು ತನಿಖೆ ನಡೆಸಿ ಕಾರಿನಲ್ಲಿದ್ದ ಶ್ರೀಗಂಧವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ದಿನಾಂಕ: 09-09-2024 ರಂದು ಮಾನ್ಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಶ್ರೀನಿವಾಸ್ ಸುವರ್ಣ ಇವರು ಆರೋಪಿಗಳಾದ ರಫೀಕ್, ಅಬೂಬಕ್ಕರ್ ಮತ್ತು ಸರ್ಫರಾಜ್ ವಿರುದ್ಧ ಸಾಕ್ಷಾಧಾರಗಳು ಸಾಬೀತಾಗದ ಕಾರಣ, ಆರೋಪಿಗಳನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ. ಆರೋಪಿಗಳ ಪರವಾಗಿ ಕಾರ್ಕಳದ ವಕೀಲರಾದ ರವಿಶಂಕರ್ ಬಿ. ಎಂ ಇವರು ವಾದಿಸಿದ್ದರು.













