ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅಭಿನಂದನೆ

ಕಾರ್ಕಳ: ಗಣರಾಜ್ಯೋತ್ಸವ ಪ್ರಯುಕ್ತ ಜನವರಿ 26ರಂದು ನಡೆಯುವ ದೆಹಲಿಯ ಪೆರೇಡ್ ನಲ್ಲಿ ಭಾಗವಹಿಸಲು ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಹೆಬ್ರಿ ತಾಲೂಕು ಶಿವಪುರದ ಕೃಷಿ ಸಖಿ ಶ್ರೀಮತಿ ಸುಗಂಧಿ ನಾಯ್ಕ್ ಇವರನ್ನು ಮಹಿಳಾ ಮೋರ್ಚಾ ವತಿಯಿಂದ ಅಭಿನಂದಿಸಿ ಅವರ ದೆಹಲಿಯ ಪ್ರಯಾಣಕ್ಕೆ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ನವೀನ್ ನಾಯಕ್, ಮಹಿಳಾ ಮೋರ್ಚಾದ ಮಾರ್ಗದರ್ಶಕರಾದ ರವೀಂದ್ರ ಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿನಯ ಬಂಗೇರ ,ಜಿಲ್ಲಾ ಉಪಾಧ್ಯಕ್ಷರಾದ ಮಾಲಿನಿ ಜೆ ಶೆಟ್ಟಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುಮಾ ರವಿಕಾಂತ್, ವಿನುತಾ ಆಚಾರ್ಯ, ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.





















