31.2 C
Udupi
Friday, May 1, 2026
spot_img
spot_img
HomeBlogತಾಯಿ-ಮಗುವಿನ ಹೃದಯವಿದ್ರಾವಕ ಅಂತ್ಯ: ಜಬಲ್ಪುರ ದೋಣಿ ದುರಂತದಲ್ಲಿ 9 ಬಲಿ

ತಾಯಿ-ಮಗುವಿನ ಹೃದಯವಿದ್ರಾವಕ ಅಂತ್ಯ: ಜಬಲ್ಪುರ ದೋಣಿ ದುರಂತದಲ್ಲಿ 9 ಬಲಿ

ಜಬಲ್ಪುರ: ದೋಣಿ ದುರಂತದಲ್ಲಿ 9 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯದ ವೇಳೆ ಮನಕಲುಕುವ ದೃಶ್ಯ ಹೊರಬಂದಿದೆ. ತಾಯಿಯೊಬ್ಬಳು ನಾಲ್ಕು ವರ್ಷದ ಮಗುವನ್ನು ಮಡಿಲಲ್ಲಿ ಬಿಗಿಯಾಗಿ ಹಿಡಿದ ಸ್ಥಿತಿಯಲ್ಲೇ ಮೃತಪಟ್ಟಿದ್ದು, ಈ ದೃಶ್ಯ ಎಲ್ಲರ ಮನಸ್ಸನ್ನು ನಡುಗಿಸಿದೆ.

ನೀರಿನಿಂದ ತಾಯಿ-ಮಗುವಿನ ಶವಗಳನ್ನು ಹೊರತೆಗೆದಾಗ ಕುಟುಂಬಸ್ಥರ ಆಕ್ರಂದನ ಗಗನಕ್ಕೇರಿತು. ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸಂಪುಟ ಸಚಿವ ರಾಕೇಶ್ ಸಿಂಗ್ ಕೂಡ ಭಾವುಕರಾಗಿ ಕಣ್ಣೀರಿಟ್ಟರು.

ಗುರುವಾರ ಬಲವಾದ ಗಾಳಿ ಕಾರಣ ಬಾರ್ಗಿ ಅಣೆಕಟ್ಟಿನ ಜಲಾಶಯದಲ್ಲಿ 29 ಪ್ರಯಾಣಿಕರಿದ್ದ ಕ್ರೂಸ್ ದೋಣಿ ಉರುಳಿದ ಪರಿಣಾಮ 9 ಮಂದಿ ಮೃತಪಟ್ಟಿದ್ದರು.
ರಕ್ಷಣಾ ಕಾರ್ಯಗಳು ವೇಗವಾಗಿ ಮುಂದುವರಿದಿದ್ದು, SDRF ತಂಡಗಳು, ಪೊಲೀಸರು ಮತ್ತು ಅಧಿಕಾರಿಗಳು ಸ್ಥಳದಲ್ಲಿ ಶ್ರಮಿಸುತ್ತಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page