
ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ‘ತಟ್ಟಂತೆ ಸುಳ್ಳು ಹೇಳಿ’ ಎಂಬ ಪ್ರಶಸ್ತಿ ಇದ್ದರೆ ಅದನ್ನು ಗೆಲ್ಲುವವರು ಬಿಜೆಪಿ ಮಾತ್ರ ಎಂದು ಕಟುವಾಗಿ ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರತಿದಿನ ಸುಳ್ಳು ಹೇಳುವುದರಲ್ಲಿ ಬಿಜೆಪಿ ಮುಂಚೂಣಿಯಲ್ಲಿದ್ದು, ಅದಿಲ್ಲದೆ ಅವರಿಗೆ ದಿನ ಸಾಗುವುದೇ ಇಲ್ಲ ಎಂಬಂತೆ ವ್ಯಂಗ್ಯವಾಡಿದರು.
ಚಾಮರಾಜನಗರ ಆಕ್ಸಿಜನ್ ದುರಂತವನ್ನು ಉಲ್ಲೇಖಿಸಿದ ಸಚಿವರು, ಆ ಸಂದರ್ಭದಲ್ಲಿ ನಿರ್ಲಕ್ಷ್ಯದಿಂದ ಅಮಾಯಕರ ಜೀವ ಹೋಗಿದ್ದು, ಕನಿಷ್ಠ ಸೌಜನ್ಯಕ್ಕೂ ಆ ಕುಟುಂಬಗಳಿಗೆ ಪರಿಹಾರ ನೀಡಿಲ್ಲ. ತಮ್ಮ ಸರ್ಕಾರದಿಂದ ಪರಿಹಾರ ಮತ್ತು ಉದ್ಯೋಗ ನೀಡಲಾಗಿದೆ ಎಂದರು.
ಪ್ರಧಾನಿ ಭೇಟಿ ವೇಳೆ ರಾಜ್ಯದ ಸಮಸ್ಯೆಗಳನ್ನು ಮುಖ್ಯಮಂತ್ರಿಯೇ ಮುಂದಿಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಜವಾಬ್ದಾರಿ ರಾಜ್ಯ ಬಿಜೆಪಿ ನಾಯಕರದ್ದಾಗಿದ್ದರೂ, ಅವರು ಮೌನವಾಗಿದ್ದು ಈಗ ಜನಪರವಾಗಿ ನಡೆದುಕೊಳ್ಳುವಂತೆ ತೋರುತ್ತಿದ್ದಾರೆ ಎಂದು ಟೀಕಿಸಿದರು.



















