
ನವದೆಹಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಗೂಗಲ್ ಮ್ಯಾಪ್ ನ ಎಡವಟ್ಟಿನಿಂದ ಬಾರಿ ದುರಂತವೊಂದು ಸಂಭವಿಸಿದ್ದು ಮದುವೆ ಮನೆಗೆ ಹೋಗುತ್ತಿದ್ದ ಕಾರೊಂದು ನದಿಗೆ ಬಿದ್ದು ಮೂವರು ಮೃತಪಟ್ಟ ಘಟನೆ ನಡೆದಿದೆ.
ಭಾನುವಾರ ಬರೇಲಿಯಿಂದ ಬದೌನ್ ಜಿಲ್ಲೆಯ ದಾತ್‌ಗಂಜ್‌ನಲ್ಲಿ ನಡೆಯಬೇಕಿದ್ದ ಮದುವೆ ಮನೆಗೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಸಹಾಯದಿಂದ ಸಂಚಾರ ಮಾಡುತ್ತಿದ್ದ ಕಾರು ಇನ್ನೂ ಕಾಮಗಾರಿ ನಡೆಯುತ್ತಿದ್ದ ಸೇತುವೆಯಿಂದ ಉರುಳಿ ನದಿಗೆ ಬಿದ್ದಿದ್ದು ಇದರಿಂದಾಗಿ ಮದುವೆ ಮನೆಗೆ ಹೋಗ್ತಿದ್ದ ಮೂವರು ಸಾವನ್ನಪ್ಪಿದ್ದಾರೆ.
ಬೆಳಗ್ಗೆ 10 ಗಂಟೆಯ ವೇಳೆಗೆ ಖಲ್ಪುರ್-ದಾತ್‌ಗಂಜ್ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದ ಸೇತುವೆಯ ಮಾಹಿತಿ ತಿಳಿಯದೇ ವಾಗವಾಗಿ ಚಲಿಸಿದೆ. ಈ ವೇಳೆ ಕಾರು ರಾಮ್‌ಗಂಗಾ ನದಿಗೆ ಉರುಳಿ ಬಿದ್ದಿದ್ದು ಪ್ರಯಾಣ ಮಾಡುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ. ಇತ್ತೀಚಿನ ಪ್ರವಾಹದ ವೇಳೆ ಸೇತುವೆಯ ಭಾಗ ಕುಸಿದಿತ್ತು. ಆದರೆ, ಇದು ಜಿಪಿಎಸ್‌ನಲ್ಲಿ ಪರಿಷ್ಕರಣೆ ಆಗದ ಹಿನ್ನಲೆಯಲ್ಲಿ ಈ ಅಚಾತುರ್ಯ ನಡೆದಿದೆ.
ವಿವೇಕ್ ಹಾಗೂ ಅಮಿತ್ ಎಂಬವರು ಸಾವನ್ನಪ್ಪಿದ್ದು ಗುರುಗ್ರಾಮದಿಂದ ಹೊರಟಿದ್ದ ಅವರು ದಾತ್‌ಗಂಜ್‌ನಲ್ಲಿ ಸ್ನೇಹಿತನ ಮದುವೆಗಾಗಿ ತೆರಳಿದ್ದರು. 50 ಫೀಟ್‌ನಿಂದ ಕೆಳಗೆ ಕಾರು ಬಿದ್ದಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ



















