
ಕಾರ್ಕಳ, ನ. 25: ಸ್ಥಳೀಯ ಶ್ರೀ ಭುವನೇಂದ್ರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯು ನ. 24 ರಂದು ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಇ. ಜನಾರ್ಧನ್ ಅವರು ಸ್ವಾಗತಿಸಿ, ಸಂಘದ ಧೈಯೋದ್ದೇಶಗಳ ಬಗ್ಗೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿ ವರದಿ ವಾಚಿಸಿದರು. ಕೋಶಾಧಿಕಾರಿ ರಾಮ್ ದಾಸ್ ಶೆಟ್ಟಿ ಅವರು ಲೆಕ್ಕ ಪತ್ರ ಮಂಡಿಸಿದರು. ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್ ಅವರು ಕಾಲೇಜಿನ ಅಭಿವೃದ್ಧಿಯ ಬಗ್ಗೆ ಮಾತನಾಡಿ ಹಳೆ ವಿದ್ಯಾರ್ಥಿ ಸಂಘ ನೀಡುತ್ತಿರುವ ಸಹಕಾರದ ಬಗ್ಗೆ ವಿವರಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್. ಸಿ. ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸೌಜನ್ಯ ಉಪಾಧ್ಯಾಯ ಅವರನ್ನು ಸಂಘದ ನೂತನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು, ಉಪಾಧ್ಯಕ್ಷ ಶಂಕರ್ ಕುಡ್ಡ ಅವರು ಮುಂದೆ ನಡೆಯಲಿರುವ ಸಂಘದ ವಾರ್ಷಿಕ ದಿನದ ಬಗ್ಗೆ ಮಾಹಿತಿ ನೀಡಿದರು. ಮೋಹನ್ ಶೆಣೈ ಮತ್ತು ಗೋವಿಂದ ಪ್ರಭು ಅವರು ಸಂಘದ ಸದಸ್ಯತನದ ಅಭಿವೃದ್ಧಿ ಬಗ್ಗೆ ಸಲಹೆ ನೀಡಿದರು. ರಾಮದಾಸ್ ಶೆಟ್ಟಿ ವಂದಿಸಿದರು.



















