ಸಾವಿರಾರು ದಾವೆಗಳಿಗೆ ₹52 ಸಾವಿರ ಕೋಟಿ ಪರಿಹಾರ ಒಪ್ಪಂದ

ವಾಷಿಂಗ್ಟನ್: ಜಾನ್ಸನ್ ಆ್ಯಂಡ್ ಜಾನ್ಸನ್ನ ಬೇಬಿ ಪೌಡರ್ ಹಾಗೂ ಇತರ ಟಾಲ್ಕಮ್ ಪೌಡರ್ಗಳ ಬಳಕೆಯಿಂದ ಅಂಡಾಶಯದ ಕ್ಯಾನ್ಸರ್ ಉಂಟಾಗಿದೆ ಎಂದು ಆರೋಪಿಸಿ ಅಮೆರಿಕದಲ್ಲಿ ದಾಖಲಾಗಿರುವ ಸಾವಿರಾರು ಮೊಕದ್ದಮೆಗಳನ್ನು ಇತ್ಯರ್ಥಗೊಳಿಸಲು ಕಂಪನಿ ಸುಮಾರು 52,000 ಕೋಟಿ ರೂ. ಪರಿಹಾರ ನೀಡಲು ಮುಂದಾಗಿದೆ.
ಈ ಒಪ್ಪಂದವು ಅಮೆರಿಕದ ಫೆಡರಲ್ ಮತ್ತು ವಿವಿಧ ರಾಜ್ಯಗಳ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಸುಮಾರು 76,000 ಪ್ರಕರಣಗಳನ್ನು ಒಳಗೊಂಡಿದೆ. ಆದರೆ, ದೂರುದಾರರಲ್ಲಿ ಶೇ.95ರಷ್ಟು ಮಂದಿ ಒಪ್ಪಿಗೆ ನೀಡಿದರೆ ಮಾತ್ರ ಈ ಪರಿಹಾರ ಯೋಜನೆ ಜಾರಿಗೆ ಬರಲಿದೆ.
ಈ ಒಪ್ಪಂದ ಜಾರಿಯಾದರೆ, ಅಮೆರಿಕದ ಕಾರ್ಪೊರೇಟ್ ಇತಿಹಾಸದಲ್ಲೇ ಇದುವರೆಗೆ ನೀಡಲಾದ ಅತ್ಯಂತ ದೊಡ್ಡ ಪರಿಹಾರ ಮೊತ್ತ ಎಂಬ ದಾಖಲೆಗೆ ಪಾತ್ರವಾಗಲಿದೆ.






















































