27.6 C
Udupi
Thursday, July 30, 2026
spot_img
spot_img
HomeBlog'ಜನರೇಷನ್ ಗಟರ್' ಹೇಳಿಕೆ ಸರಿಯಲ್ಲ: ಕಂಗನಾ ವಿರುದ್ಧ ಸೋನು ಸೂದ್ ಆಕ್ರೋಶ

‘ಜನರೇಷನ್ ಗಟರ್’ ಹೇಳಿಕೆ ಸರಿಯಲ್ಲ: ಕಂಗನಾ ವಿರುದ್ಧ ಸೋನು ಸೂದ್ ಆಕ್ರೋಶ

ನವದೆಹಲಿ: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಜೆನ್‌ ಝಡ್ (Gen Z) ಪ್ರತಿಭಟನಾಕಾರರ ವಿರುದ್ಧ ನೀಡಿದ ಹೇಳಿಕೆಗೆ ಬಾಲಿವುಡ್ ನಟ ಸೋನು ಸೂದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವಕರೇ ನಟರನ್ನು ಸ್ಟಾರ್‌ಗಳನ್ನಾಗಿ ಮಾಡುತ್ತಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು ಸೂದ್, ಕಂಗನಾ ಅವರ ಸಂಪೂರ್ಣ ಹೇಳಿಕೆಯನ್ನು ಕೇಳಿಲ್ಲ ಎಂದು ಹೇಳಿದರೂ, ಯುವಜನರನ್ನು ಗೌರವಿಸುವುದು ಮತ್ತು ಅವರ ಧ್ವನಿಯನ್ನು ಆಲಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

“ಯುವಕರೇ ನಟರನ್ನು ಸ್ಟಾರ್ ಮಾಡುತ್ತಾರೆ. ಈ ಸ್ಥಾನಕ್ಕೆ ತಲುಪಲು ಅವರೇ ಕಾರಣ. ಅವರು ನಮ್ಮ ಜೊತೆ ಇರುವವರೆಗೂ ನಾವು ಬೆಳೆಯುತ್ತೇವೆ. ಅವರು ದೂರವಾದರೆ ಅದು ಕಷ್ಟವಾಗುತ್ತದೆ. ಆದ್ದರಿಂದ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು” ಎಂದು ಅವರು ಹೇಳಿದರು.

ನೀವು ನಟರಾಗಿರಲಿ, ವೈದ್ಯರಾಗಿರಲಿ ಅಥವಾ ಯಾವುದೇ ವೃತ್ತಿಯಲ್ಲಿರಲಿ, ಜನರು ನಿಮ್ಮನ್ನು ಬೆಂಬಲಿಸುವವರೆಗೆ ಮಾತ್ರ ನಿಮ್ಮ ಅಸ್ತಿತ್ವಕ್ಕೆ ಅರ್ಥ ಇರುತ್ತದೆ ಎಂದು ಸೋನು ಸೂದ್ ಹೇಳಿದರು.

ಪ್ರತಿಭಟನಾಕಾರರನ್ನು ಕಂಗನಾ ‘ಜನರೇಷನ್ ಗಟರ್’ ಎಂದು ಕರೆದಿರುವ ಕುರಿತು ಕೇಳಿದ ಪ್ರಶ್ನೆಗೆ, “ಅವರು ನಿಜವಾಗಿಯೂ ಹಾಗೆ ಹೇಳಿದ್ದರೆ ಅದು ಸರಿಯಲ್ಲ. ಅಂತಹ ಹೇಳಿಕೆ ನೀಡಬಾರದಿತ್ತು. ಅದು ನಾಚಿಗೇಡಿನ ಸಂಗತಿ,” ಎಂದು ಪ್ರತಿಕ್ರಿಯಿಸಿದರು.

ಮಾತನಾಡುವ ಮೊದಲು ಮಾತುಗಳನ್ನು ಎಚ್ಚರಿಕೆಯಿಂದ ತೂಗಿ ನೋಡಬೇಕು. ಸಾರ್ವಜನಿಕರು ದೇವರ ಮತ್ತೊಂದು ರೂಪವಾಗಿದ್ದು, ನೀವು ಮಾತನಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಬಹಳ ಮುಖ್ಯ ಎಂದು ಸೋನು ಸೂದ್ ಹೇಳಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page