
ಬೆಂಗಳೂರು: ಕನ್ನಡದ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರು ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಎಸ್ ನಾರಾಯಣ್ ಪುತ್ರ ಪವನ್ ಹಾಗೂ ಪವಿತ್ರ ಎಂಬವರಿಗೆ 2021 ರಲ್ಲಿ ಮದುವೆಯಾಗಿದ್ದು ಆದರೆ ಇದೀಗ ಸೊಸೆ ಪವಿತ್ರ ಅವರು ಮಾವ ಎಸ್ ನಾರಾಯಣ್, ಅತ್ತೆ ಭಾಗ್ಯಲಕ್ಷ್ಮಿ ಹಾಗೂ ಪತಿ ಪವನ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. ಮದುವೆಯಲ್ಲಿ ವರದಕ್ಷಿಣೆ ಕೊಟ್ಟರೂ ಹೆಚ್ಚಿನ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದಾರೆ.
ಪವನ್ ಗೆ ಸರಿಯಾದ ಕೆಲಸವಿಲ್ಲ. ಹೀಗಾಗಿ ನಾನೇ ದುಡಿದು ಮನೆ ನಡೆಸುತ್ತಿದೆ. ಇದೆ ವೇಳೆ ಕಲಾ ಸಾಮ್ರಾಟ್ ಟೀಮ್ ಅಕಾಡೆಮಿ ಆರಂಭಿಸಲು ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಾಗ ನಾನು ನನ್ನ ಒಡವೆಗಳನ್ನು ಅಡವಿಟ್ಟು ಹಣ ಕೊಟ್ಟಿದ್ದೆ. ಆದರೆ ಕೆಲವೇ ಸಮಯದಲ್ಲಿ ನಷ್ಟವಾಗಿ ಕಲಾ ಸಾಮ್ರಾಟ ಟೀಂ ಅಕಾಡೆಮಿ ಕ್ಲೋಸ್ ಆಯಿತು. ತನ್ನ ಹೆಸರಿನಲ್ಲಿ ಪವನ್ ಗೆ 10 ಲಕ್ಷ ರೂಪಾಯಿ ಸಾಲ ನೀಡಿದ್ದು ಇದೀಗ ತನ್ನನ್ನೇ ಅವರ ಮನೆಯಿಂದ ಆಚೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಈ ದೂರಿನ ವಿರುದ್ಧ ಪ್ರತಿಕ್ರಿಯಿಸಿದ ಎಸ್ ನಾರಾಯಣ್ ‘ಪವಿತ್ರ ಮನೆ ಬಿಟ್ಟು ಹತ್ತು ತಿಂಗಳು ಆಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಎಂದು ಹೇಳಿದರೆ ನಾನು ಅವರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆ ಆಗಿ ಒಂದು ತಿಂಗಳ ಬಳಿಕ ಮಾತುಕತೆಯೆ ನಿಂತು ಹೋಯಿತು. ವಯಸ್ಸು ವ್ಯಕ್ತಿತ್ವ ಎರಡಕ್ಕೂ ಪವಿತ್ರ ಬೆಲೆ ಕೊಡುತ್ತಿರಲಿಲ್ಲ. ನಾವೇನೋ ಹಿಂಸೆ ಕೊಟ್ಟಿದ್ದೇವೆ ಅಂತ ದೂರು ಕೊಟ್ಟಿದ್ದು ಅದು ಕೋರ್ಟಿಗೆ ಹೋಗಿದೆ. ನಾವು ಅದರ ಬಗ್ಗೆ ಹೇಳಿದ್ರೆ ಅವರಿಗೇ ಅವಮಾನ ಮಾಡಿದಂತೆ ಆಗುತ್ತೆ. ಪಾಪ ಹೆಣ್ಮಗು ಅಲ್ವಾ? ಅವರಿಗೆ ತೇಜೋವಧೆ ಮಾಡಬಾರದು. ನನ್ನ ವ್ಯಕ್ತಿತ್ವ ಎಲ್ಲರಿಗೂ ಗೊತ್ತು, ನಾವು ಸದಾ ಹೆಣ್ಮಕ್ಕಳನ್ನ ಗೌರವರಿಂದ ಕಾಣುವಂತಹವರು’ ಎಂದು ಹೇಳಿದ್ದಾರೆ.



















