ಮೇ 28ರಿಂದ ಜೂನ್ 3ರೊಳಗೆ ಪ್ರವೇಶ ಸಾಧ್ಯ

ನವದೆಹಲಿ: ಕೇರಳಕ್ಕೆ ಮೇ 26ರಂದೇ ನೈಋತ್ಯ ಮುಂಗಾರು ಪ್ರವೇಶಿಸಲಿದೆ ಎಂಬ ನಿರೀಕ್ಷೆ ಈಡೇರಿಲ್ಲ. ಹವಾಮಾನದಲ್ಲಿನ ಬದಲಾವಣೆಗಳಿಂದ ಮುಂಗಾರು ಆಗಮನದಲ್ಲಿ ವಿಳಂಬವಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುಂಚಿತ ಪ್ರವೇಶದ ಮುನ್ಸೂಚನೆ ನೀಡಿದ್ದರೂ, ಸಮುದ್ರದ ತಾಪಮಾನ, ಗಾಳಿಯ ವೇಗ ಹಾಗೂ ವಾತಾವರಣದ ಒತ್ತಡದ ವ್ಯತ್ಯಾಸದಿಂದ ಮುಂಗಾರು ಕೇರಳ ತಲುಪಿಲ್ಲ. ಇದೀಗ ಮೇ 28ರಿಂದ ಜೂನ್ 3ರೊಳಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳ ತಲುಪುವ ಮುಂಗಾರು, ನಂತರ ದೇಶದಾದ್ಯಂತ ವ್ಯಾಪಿಸಿ ನಾಲ್ಕು ತಿಂಗಳ ಕಾಲ ಮಳೆಯ ವಾತಾವರಣವನ್ನು ಸೃಷ್ಟಿಸುತ್ತದೆ.




























