ಮಾನವ ಸರಪಳಿ ನಿರ್ಮಾಣದ ಕುರಿತು ಚರ್ಚೆ

ಕಾರ್ಕಳ: ಸೆ. 15ರಂದು ಜರುಗಲಿರುವ ‘’ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ‘’ ಆಚರಿಸುವ ಕುರಿತು ಪೂರ್ವಭಾವಿ ಸಭೆಯು ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸೆ. 15ರಂದು ಜರಗಲಿರುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸುವ ಉದ್ದೇಶದಿಂದ ಮಾನವ ಸರಪಳಿ ನಿರ್ಮಾಣಮಾಡಬೇಕು. ಮಾನವ ಸರಪಳಿಯಲ್ಲಿ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರಕಾರಿ ಅಧಿಕಾರಿಗಳು, ಸಿಬ್ಬಂದಿಗಳು, ನಾನಾ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈ ಜೋಡಿಸಲಿದ್ದಾರೆ. ಕಾಪು ಮತ್ತು ಕಾರ್ಕಳ ತಾಲೂಕು ವತಿಯಿಂದ ಕಾಪು ತಾಲೂಕಿನ ರಾಷ್ಟ್ರೀಯ ಕ ಹೆದ್ದಾರಿ 66 ರ ಉದ್ಯಾವರದ ಬ್ರಿಡ್ಜ್ನಿಂದ ಹೆಜಮಾಡಿ ಟೋಲ್‌ಗೇಟ್ ದಾಟಿ ಶಾಂಭವಿ ಬ್ರಿಡ್ಜ್ವರೆಗೆ ಮಾನವ ಸರಪಳಿ ರಚಿಸಲಾಗುತ್ತದೆ. ಉತ್ತರದಲ್ಲಿ ಉಡುಪಿ ತಾಲೂಕು ಮತ್ತು ದಕ್ಷಿಣದಲ್ಲಿ ಮಂಗಳೂರು ಜಿಲ್ಲೆಯ ಸರಪಳಿ ಜೋಡಣೆಯಾಗಲಿದೆ. ಕಾಪು ಮತ್ತು ಕಾರ್ಕಳ ತಾಲೂಕಿನಲ್ಲಿ ಸುಮಾರು 24000 ಮಂದಿ ಪಾಲ್ಗೊಳ್ಳಲಿದ್ದಾರೆ.
ಜೇಮ್ಸ್ ಡಿಸಿಲ್ವ, ಕಾರ್ಯ ನಿರ್ವಹಣಾಧಿಕಾರಿ, ಕಾಪು ತಾಲೂಕು ಪಂಚಾಯತ್ ರವರು ಮಾತಾಡಿ ಜಾತ್ಯಾತೀತ, ಧರ್ಮಾತೀತ, ಪಕ್ಷಾತೀತವಾಗಿ ಎಲ್ಲರೂ ಮಾನವ ಸರಪಳಿಯಲ್ಲಿ ಭಾಗವಹಿಸಬೇಕು ಎಂದು ಕಾರ್ಯಕ್ರಮದ ರೂಪುರೇಷೆಯನ್ನು
ವಿವರಿಸಿದರು.
ಸಭೆಯಲ್ಲಿ ಕಾರ್ಕಳ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ತಹಶೀಲ್ದಾರರು,ಕಾರ್ಯ ನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಕಾರ್ಕಳ ಮತ್ತು ಕಾಪು, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಕಳ, ಪುರಸಭೆ ಅಧಿಕಾರಿ ಕಾರ್ಕಳ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಾರ್ಕಳ, ಗಜೆಟೆಡ್ ಮ್ಯಾನೇಜರ್, ಸಮಾಜ ಕಲ್ಯಾಣ ಇಲಾಖೆ ಉಡುಪಿ ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಕಾಲೇಜು ಪ್ರಾಂಶುಪಾಲರು, ಶಾಲಾಮುಖ್ಯೋಪಾಧ್ಯಾಯರುಗಳು ಹಾಗೂ ಇತರರು ಉಪಸ್ಥಿತರಿದ್ದರು.













