
ಕಾರ್ಕಳ: ಏಪ್ರಿಲ್ 16, 2026ರಂದು ತಾಲೂಕಿನ ಹವಲ್ದಾರ್ ಬೆಟ್ಟುವಿನಲ್ಲಿ ಬ್ರಹ್ಮಶ್ರೀ ಸತ್ಯಸಾರಮಣಿ-ಹಲೇರ ಪಂಜುರ್ಲಿ, ಚಾಮುಂಡೇಶ್ವರಿ ಗುಳಿಗ ದೇವಸ್ಥಾನದ 67ನೇ ವಾರ್ಷಿಕ ನೇಮೋತ್ಸವವು ಭಕ್ತಿಭಾವದಿಂದ ನಡೆಯಲಿದೆ.
ನೇಮೋತ್ಸವದ ಅಂಗವಾಗಿ ವಿವಿಧ ಪೂಜೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಸಂಜೆ 3.30ಕ್ಕೆ ಗಣಹೋಮ ಹಾಗೂ ದೈವಗಳ ಶುದ್ಧೀಕರಣ ಆರಂಭವಾಗಲಿವೆ. ನಂತರ ರಾತ್ರಿ 7ರಿಂದ 9.30ರವರೆಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9.30ರಿಂದ ಸತ್ಯಸಾರಮಾಣಿ (ಕಾನದ-ಕಟದ) ದೈವಗಳ ದರ್ಶನ, 10:30 ರಿಂದ ಹಲೇರಾ ಪಂಜುರ್ಲಿ ದೈವದ ನೇಮೋತ್ಸವ ಹಾಗೂ ಮುಂಜಾನೆ 02:00 ಗಂಟೆಯಿಂದ ಶ್ರೀ ಚಾಮುಂಡೇಶ್ವರಿ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಮಿತಿ ಸದಸ್ಯರು ಭಕ್ತರನ್ನು ಆಹ್ವಾನಿಸಿದ್ದು, ಸಿರಿಮುಡಿ ಶ್ರೀ ದೈವಗಳ ಗಂಧ-ಪ್ರಸಾದ ಸ್ವೀಕರಿಸಿ ತನು-ಮನ-ಧನಗಳಿಂದ ಸಹಕಾರ ನೀಡಿ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ್ದಾರೆ.












