
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳು ಉಡುಪಿಯ ಪ್ರೀಮಿಯರ್ ಲೀಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿ, 8ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಇಶಾನ್ ಹೆಗ್ಡೆ ಮತ್ತು 10ನೇ ತರಗತಿ ವಿದ್ಯಾರ್ಥಿ ವಂಶ್ ಎಂ ಇವರು ಯುನೈಟೆಡ್ ಕೋರ್ಟ್ ಫಿಯರ್ಸ್ ಫೈಟರ್ ತಂಡವನ್ನು ಪ್ರತಿನಿಧಿಸಿ ಎರಡನೇ ಸ್ಥಾನವನ್ನು ಪಡೆದಿರುತ್ತಾರೆ.
ಇದೇ ಕ್ರೀಡಾ ಆಯೋಜನೆಯಲ್ಲಿ ಸಂಸ್ಥೆಯ ಇನ್ನೋರ್ವ ವಿದ್ಯಾರ್ಥಿ ಮಾಸ್ಟರ್ ಅಶ್ವಿನ್ ಶೆಟ್ಟಿ 8ನೇ ತರಗತಿ ಇವರು ರೆಟ್ರೋ ಸ್ಮಾಶಸ್ ತಂಡವನ್ನು ಪ್ರತಿನಿಧಿಸಿ ತೃತೀಯ ಸ್ಥಾನಮಾನವನ್ನು ಪಡೆದಿರುತ್ತಾರೆ. ಈ ಪಂದ್ಯಾಟವು ಜೂನ್ 14, 2025 ರಂದು ಉಡುಪಿಯಲ್ಲಿ ನಡೆದಿತ್ತು. ಇವರನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.













