27.7 C
Udupi
Saturday, April 25, 2026
spot_img
spot_img
HomeBlogಕಾರ್ಕಳ : ಮುಡಾರಿನ ಮನೆಯೊಂದರಲ್ಲಿ ಗಾಂಜಾ ಪತ್ತೆ: ದೂರು ದಾಖಲು

ಕಾರ್ಕಳ : ಮುಡಾರಿನ ಮನೆಯೊಂದರಲ್ಲಿ ಗಾಂಜಾ ಪತ್ತೆ: ದೂರು ದಾಖಲು

ಕಾರ್ಕಳ: ಸಪ್ಟೆಂಬರ್ 26ರಂದು ಮುಡಾರಿನ ಮನೆಯೊಂದರಲ್ಲಿ ಗಾಂಜಾ ಪತ್ತೆಯಾಗಿದ್ದು ಪೋಲಿಸರು ಗಾಂಜಾ ವಶಪಡಿಸಿಕೊಂಡು ಆಪಾದಿತನ ವಿರುದ್ಧ ಪ್ರಕರಣದ ದಾಖಲಿಸಿಕೊಂಡಿದ್ದಾರೆ.ಮುಡಾರು ಗ್ರಾಮದ ಮಿಯಾರು ಸೇತುವೆ ಬಳಿಯ ಶಾಜಿ ಮ್ಯಾಥ್ಯೂ ಎಂಬವರು 2023ರಲ್ಲಿ ಗಾಂಜಾ ಕೇಸ್ಗೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಶೋಧನ ವಾರಂಟನ್ನು ಜಾರಿ ಮಾಡಲು ಗುರುವಾರದಂದು ಹೆಬ್ರಿ ಪೊಲೀಸ್ ಠಾಣಾ ಪಿಎಸ್ಐ ಮಹಾಂತೇಶ್ ಜಾಬಗೌಡ, ಸಿಬ್ಬಂದಿ ರಕ್ಷಿತ್, ಪ್ರಸನ್ನ ಅವರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಾಂಜಾ ಇರಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಮನೆಯ ಸ್ಟೋರ್ ರೂಮ್ ನ ಸೋಫಾದಲ್ಲಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ನಿಷೇಧಿಸ ಮಾದಕ ವಸ್ತುವಾದ ಗಾಂಜಾದ ಎಲೆ, ಹೂವು ಮತ್ತು ಮೊಗ್ಗಿನ ಭಾಗಗಳು ಪತ್ತೆಯಾಗಿದ್ದು ಪೊಲೀಸರು ಶಾಜಿ ಮ್ಯಾಥ್ಸ್ಯೂ ಅವರ ಮಗ ಆಪಾದಿತ ಸುನಿಲ್ ಜೋಸೆಫ್ ಟಿ. ಎಸ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page