
ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು ಕಾರ್ಕಳ,ಹೆಬ್ರಿ ತಾಲೂಕು ಸಮಿತಿ ಮತ್ತು ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘ ಹಾಗೂ ಯುವ ಬಂಟರ ಸಂಘ ಇವರ ಸಂಯೋಗದಲ್ಲಿ ಆ.11 ರಂದು ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರ ಮತ್ತು ಕೆಸರ್ದ ಕೂಟವು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪೆರ್ವಾಜೆಯಲ್ಲಿ ನಡೆಯಲಿದೆ.
ಇದರ ಪೂರ್ವ ತಯಾರಿಯಾಗಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಬಂಟರ ಯಾನೆ ನಾಡವರ ಮಾತೃ ಸಂಘ ಕಾರ್ಕಳ, ಹೆಬ್ರಿ ಸಂಚಾಲಕರಾದ ವಿಜಯ್ ಶೆಟ್ಟಿ ಅವರ ನೇತೃತ್ವದಲ್ಲಿ ಜು:30 ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.






















































































