
ಕಾರ್ಕಳ: ಪೊಲೀಸರು ಸಾಣೂರಿನಲ್ಲಿ ಅನೈತಿಕ ಚಟುವಟಿಕೆ ಮಾಡುತ್ತಿದ್ದ ಮೂರು ಮಂದಿಯ ಮೇಲೆ ದೂರು ದಾಖಲು ಮಾಡಿದ ಬಳಿಕ ಆ ಕೇಸಿನಲ್ಲಿದ್ದ ಭರತ್ ಎಂಬವರ ಹೆಸರಿನಲ್ಲಿ ಅಧ್ಯಾಪಕೋರ್ವರ ಭಾವಚಿತ್ರವನ್ನು ಹರಿಬಿಟ್ಟ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸಾಣೂರಿನ ಅವಿನಾಶ್ ಕಾಂಪೌಂಡ್ ಬಳಿ ಭರತ್, ಸಂಪತ್ ಉಳ್ಳಾಲರವರು ಮಹಿಳೆಯೊಬ್ಬರಿಗೆ ಸಂಬಂಧಪಟ್ಟ ಮನೆಯಲ್ಲಿ ಸಂತ್ರಸ್ತೆ ಯುವತಿಯೊಬ್ಬಳನ್ನು ಇರಿಸಿಕೊಂಡು ಅನೈತಿಕ ಚಟುವಟಿಕೆಯನ್ನು ಮಾಡುತ್ತಿದ್ದಾಗ ಇದರ ಸುಳಿವು ಸಿಕ್ಕಿದ ಪೊಲೀಸರು ದಾಳಿ ಮಾಡಿ ಬಳಿಕ ಭರತ್ ಎಂಬಾತನ ಭಾವಚಿತ್ರವನ್ನು ಮಾಧ್ಯಮಗಳು ಪ್ರಕಟಗೊಳಿಸಿದ್ದವು.
ಆದರೆ ಪೊಲೀಸರು ಕೇಸು ದಾಖಲಿಸಿದ ಅನೈತಿಕ ಚಟುವಟಿಕೆಯ ಆರೋಪಿಯ ಬದಲಾಗಿ ವಾಟ್ಸಪ್ ಗ್ರೂಪ್ ಗಳಲ್ಲಿ ಶಿಕ್ಷಕರಾಗಿದ್ದ ಭರತ್ ಎಂಬವರ ಭಾವಚಿತ್ರವನ್ನು ಹಾಕಿ ವೈರಲ್ ಮಾಡಲಾಗಿತ್ತು. ಇದರಿಂದ ಮನನೊಂದ ಅಧ್ಯಾಪಕ ಭರತ್ ರವರು ತನ್ನ ಭಾವಚಿತ್ರವನ್ನು ಹಾಕಿ ವೈಯಕ್ತಿಕ ತೇಜೋವಧೆ ಮಾಡುವುದನ್ನು ಕಂಡು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ರೀತಿ ಸಮರ್ಪಕ ಮಾಹಿತಿಗಳಲ್ಲದೆ ಮಾಹಿತಿಗಳನ್ನು ಶೇರ್ ಮಾಡಿದಾಗ ಶೇರ್ ಮಾಡಿದಾತ ಹಾಗೂ ಆ ವಾಟ್ಸಪ್ ಗ್ರೂಪಿನ ಅಡ್ಮಿನ್ ಮಾತ್ರ ಕಾನೂನು ಚೌಕಟ್ಟಿಗೆ ಒಳಪಡುತ್ತಾರೆ. ಹೀಗಾಗಿ ಎಲ್ಲಾ ವಾಟ್ಸಪ್ ಗ್ರೂಪಿನ ಅಡ್ಮಿನ್ ಗಳು ವಿಮರ್ಶೆ ಮಾಡುವುದು ಒಳಿತು ಎಂದು ಎಚ್ಚರಿಕೆ ನೀಡಲಾಗಿದೆ.













