
ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 3 ಆರೋಪಿಗಳನ್ನು ಬಂದಿಸಲಾಗಿದ್ದು, ಅವರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ
ಆಂಧ್ರ ಪ್ರದೇಶ ಕಡಪ ಜಿಲ್ಲೆಯ ಗಿರಿರಾಜು ಜಗಾಧಾಬಿ (31) ಹಾಗೂ ಕಾಪು ತಾಲೂಕು ಶಂಕರಪುರದ ಜಾನ್ ನೊರೋನ್ಹಾ (30) ಎಂದು ಹೇಳಲಾಗಿದೆ.ಅತ್ಯಾಚಾರ ಕುರಿತು ಆ. 23ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಕಾರ್ಕಳ ಬಂಗ್ಲೆಗುಡ್ಡೆಯ ಅಲ್ತಾಫ್ (34)ನನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಕಾರ್ಕಳ ರಂಗನಪಲ್ಕೆಯ ಸಾವಿಯೋ ರಿಚರ್ಡ್ ಕ್ವಾಡ್ರಸ್ (35)ನನ್ನು ಪೊಲೀಸರು ಬಂಧಿಸಿದ್ದರು.ಅಲ್ತಾಫ್ ನನ್ನು ವಿಚಾರಣೆ ಮಾಡಿದಾಗ ಕಾರ್ಕಳದ ಅಭಯ್ (23) ಡ್ರಗ್ಸ್ ಪೂರೈಸಿರುವುದಾಗಿ ತಿಳಿಸಿರುತ್ತಾನೆ. ಪೊಲೀಸರು ಅಭಯ್ ನನ್ನು ವಶಕ್ಕೆ ಪಡೆದು ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ವಿಚಾರಿಸಿದಾಗ ಗಿರಿರಾಜು ಹಾಗೂ ಜಾನ್ ನೊರೋನ್ಹಾ ಅವರ ಹೆಸರು ಬಹಿರಂಗಪಡಿಸಿರುತ್ತಾನೆ.













