27.9 C
Udupi
Tuesday, May 5, 2026
spot_img
spot_img
HomeBlogಕಳವು ಮಾಡಿದ ಮರಳು ಗಾಡಿಗೆ ತಪ್ಪಿಸಿಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖಾ ವಾಹನಕ್ಕೆ ಪ್ರತಿಬಂಧ

ಕಳವು ಮಾಡಿದ ಮರಳು ಗಾಡಿಗೆ ತಪ್ಪಿಸಿಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖಾ ವಾಹನಕ್ಕೆ ಪ್ರತಿಬಂಧ

ಕಾರು ಸಹಿತ ಯುವಕನ ಸೆರೆ

ಕಾರ್ಕಳ: ಜ.3ರಂದು ಪೊಲೀಸ್ ತಪಾಸಣೆಯ ವೇಳೆ ಅಕ್ರಮ ಮರಳು ಸಾಗಾಟದ ವಾಹನದ ತಪಾಸಣೆಗೆ ಅಡ್ಡಿಪಡಿಸಿರುವ ಘಟನೆ ವರದಿಯಾಗಿದೆ.

ಪೊಲೀಸರು ಸಿಬ್ಬಂದಿಯವರೊಂದಿಗೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಸರ್ವಜ್ಜ ಸರ್ಕಲ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಕೆಎ.19 ಡಿ. 9245 ನೇ ನಂಬ್ರದ ಟಿಪ್ಪರ್ ಲಾರಿಯಲ್ಲಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿದ್ದು ಕಳವು ಮಾಡಿದ ಮರಳನ್ನು ತಪ್ಪಿಸಿಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖಾ ವಾಹನಕ್ಕೆ ಪ್ರತಿಬಂಧವನ್ನು ಉಂಟು ಮಾಡಲು ಟಿಪ್ಪರ ಲಾರಿಗೆ ಬೆಂಗಾವಲು ಮಾಡುತ್ತಿದ್ದ ಕೆಎ, 19 ಎಮ್‌‌ಬಿ. 7472 ನೇ ನಂಬ್ರದ ರಿಡ್ಸ್ ಕಾರು ಚಾಲಕ ಟಿಪ್ಪರ ಲಾರಿ ಬೆನ್ನಟ್ಟುವಾಗ ಒಮ್ಮೆಲೇ ಇಲಾಖಾ ವಾಹನದ ಮುಂದೆ ಚಲಾಯಿಸಿ ಕೊಂಡು ಹೋಗಿ ಇಲಾಖಾ ವಾಹನ ಮುಂದೆ ಹೋಗದಂತೆ ಆರೋಪಿತರು ಸಂಘಟಿತರಾಗಿ ಕೃತ್ಯಉಂಟು ಮಾಡಿ ತಡೆಯುಂಟು ಮಾಡಿರುತ್ತಾರೆ. ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದ್ದು, ಈತನನ್ನು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮ ಜಯಂತಿನಗರದ ಸಯ್ಯದ್ ಸೈಫ್( 22)ಎಂದು ಗುರುತಿಸಲಾಗಿದೆ.

ಕಾರ್ಕಳ ನಗರ ಠಾಣಾ ಪೊಲೀಸರು ಪತ್ತೆ ಹಚ್ಚಿ ಯುವಕನನ್ನು ಬಂಧಿಸಿ
ಈತನನ್ನು ವಿಚಾರಣೆ ಮಾಡಿದ ಸಮಯಯದಲ್ಲಿ, ಅಮಲು ಪದಾರ್ಥ ಸೇವಿಸಿದಂತೆ ವರ್ತನೆ ಮಾಡುತ್ತಿದ್ದು, ಈ ಸಮಯ ಅನುಮಾನಗೊಂಡು ಈತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ಪರೀಕ್ಷಿಸಿ ನಡೆಯಿಸಿ ದೃಡಪತ್ರ ನೀಡುವಂತೆ ಕೋರಿ ದಿನಾಂಕ ಜ.14 ಮಂಗಳವಾರ ಕಾರ್ಕಳ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ವೈದ್ಯಕೀಯ ವರದಿ ಬಂದಿದ್ದು, ಈತನು ಮಾದಕ ಹಾಗೂ ಮನೋದ್ರೇಕಕಾರಿ ವಸ್ತು ಗಾಂಜಾದ ಉತ್ಪನ್ನವಾದ ಟೆಟ್ರಾ ಹೈಡ್ರೋ ಕ್ಯಾನ್ ಬಿಲ್ ಪದಾರ್ಥ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿಯಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page