
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಕಾರ್ಕಳ ತಾಲೂಕು ಘಟಕದ ವತಿಯಿಂದ ದೇಶಕ್ಕೆ ಅಪ್ರತಿಮ ಕೊಡುಗೆ ನೀಡಿದ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯ ನಿರ್ಮಾಣಕ್ಕೆ ಕಾರಣೀಭೂತರಾದ ಭಾರತ ರತ್ನ ಶ್ರೇಷ್ಠ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯನ್ನು ನಡೆಸಲಾಯಿತು.
ಈ ಕಾರ್ಯಕ್ರಮವು ಅಮಿತ್ ಎಸ್ ಪೈ ಮೆಮೋರಿಯಲ್ ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರ ಪೆರ್ವಾಜೆ ಕಾರ್ಕಳ ಇಲ್ಲಿ ಜರುಗಿತ್ತು
ಸಭೆಯ ಅಧ್ಯಕ್ಷತೆಯನ್ನು ಕಾರ್ಕಳ ಕಸಾಪ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಇವರು ವಹಿಸಿ ಮಾತಾನಾಡುತ್ತಾ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರು ಜನ್ಮ ದಿನಾಚರಣೆಯ ಮಹತ್ವ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಕೊಡುಗೆಗಳನ್ನು ಸ್ಮರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ ಬಳಿಕ ಕಾರ್ಕಳದ ಹಿರಿಯ ಸಿವಿಲ್ ಇಂಜಿನಿಯರ್ ಶ್ರೀನಿವಾಸ ಜಿ ಕೆ ಪೈ ಯವರನ್ನು ಸ್ಮನಾನಿಸಿ ಅಭಿನಂದನಾ ನುಡಿಗಳನ್ನಾಡಿದರು.
ಸಮಾರಂಭದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ ಎಂ ವಿಶ್ವೇಶ್ವರಯ್ಯನವರ ನಿಕಟ ಸಂಬಂಧ ಬಗ್ಗೆ ಮತ್ತು ಸನ್ಮಾನಿತರಾದ ಕಾರ್ಕಳದ ಹಿರಿಯ ಸಿವಿಲ್ ಇಂಜಿನಿಯರ್ ಶ್ರೀನಿವಾಸ ಜಿ ಕೆ ಪೈಯವರ ಸಮಾಜಸೇವೆಗೆ ಅಭಿಮಾನದ ಮಾತುಗಳನ್ನಾಡಿ ಯಾವುದೇ ಸಾಧನೆ ಮತ್ತು ಜೀವನದ ವ್ಯಕ್ತಿತ್ವದ ಬಗ್ಗೆ ಶ್ಲಾಘಿಸಿ ಶುಭಕೋರಿದರು.
ಮುಖ್ಯ ಅತಿಥಿ ಶ್ರೀನಿವಾಸ ಜಿ ಕೆ ಪೈ ಯವರ ಶಿಷ್ಯ ಎಸೋಸಿಯೇಟ್ ಆಫ್ ಸಿವಿಲ್ ಇಂಜಿನಿಯರ್ ಕಾರ್ಕಳ ಅಧ್ಯಕ್ಷ ವಿಜಯರಾಜ್ ಶೆಟ್ಟಿ ಇಂಜಿನಿಯರ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಸನ್ಮಾನಿತಗೊಂಡ ತನ್ನ ಗುರುಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಎಸೋಸಿಯೇಟ್ ಆಫ್ ಕಾರ್ಕಳ ಇದರ ಪೂರ್ವಾಧ್ಯಕ್ಷ ಹಿತೇಶ್ ಕುಮಾರ್ ಶೆಟ್ಟಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಪ್ರತಿನಿಧಿ ಎಸ್ ನಿತ್ಯಾನಂದ ಪೈ ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮೋಹನ್ ಪಡಿವಾಳ ಕಸಾಪ ಘಟಕದ ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿವಸುಬ್ರಹ್ಮಣ್ಯ ಭಟ್ ನಾಗೇಶ್ ನಲ್ಲೂರು ಸುಬ್ರಹ್ಮಣ್ಯ ಉಪಾಧ್ಯ ಗಂಗಾಧರ ಪಣಿಯೂರು ಸುಲೋಚನಾ ಬಿ ವಿ ಡಾ ಮಾಲತಿ ಆಶೀಶ್ ಶೆಟ್ಟಿ ವೀಣಾ ರಾಜೇಶ್ ಭಂಡಾರಿ ಮೋಹನದಾಸ್ ಶೆಣೈ ಯೋಗೇಂದ್ರ ನಾಯಕ್ ರೋಟೇರಿಯನ್ ಸುರೇಂದ್ರ ನಾಯಕ್ ಸಿವಿಲ್ ಇಂಜಿನಿಯರ್ ಪ್ರಶಾಂತ್ ಬಿಳಿರಾಯ ಸಿವಿಲ್ ಇಂಜಿನಿಯರ್ ದಿವಾಕರ ಶೆಟ್ಟಿ ಹಾಗೂ ಎಸೋಸಿಯೇಟ್ ಆಫ್ ಸಿವಿಲ್ ಇಂಜಿನಿಯರ್ ಕಾರ್ಕಳ ಇದರ ಸರ್ವ ಸದಸ್ಯರು ಯೋಗ ಕೇಂದ್ರದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿನ್ಯಾಸ್ ಇಂಜಿನಿಯರಿಂಗ್ ಎಂಡ್ ಕನ್ಸಲ್ಟಿಂಗ್ ಎಸೋಸಿಯೇಟ್ ಹಿರಿಯ ಸಿವಿಲ್ ಇಂಜಿನಿಯರ್ ಶ್ರೀನಿವಾಸ ಜಿ ಕೆ ಪೈ ಹಾಗೂ ನಿರ್ಮಲ ಶ್ರೀನಿವಾಸ ಇವರನ್ನು ಇಂಜಿನಿಯರ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧನೆಗಾಗಿ ಕನ್ನಡ ಸಾಹಿತ್ಯ ಉಡುಪಿ ಜಿಲ್ಲಾ ಕಾರ್ಕಳ ತಾಲೂಕು ಘಟಕದ ವತಿಯಿಂದ ವಿಶೇಷ ಗೌರವ ಸಲ್ಲಿಸಿ ಕರುನಾಡ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಅಭಿನಂದನಾ ಪತ್ರವನ್ನು ಡಾ ಸುಮತಿ ವಾಚಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಸಂಜಯ್ ಕುಮಾರ್ ನಿರೂಪಿಸಿ ಕುಮಾರಿ ಧಾರಿಣಿ ಉಪಾಧ್ಯ ಪ್ರಾರ್ಥನೆಗೈದರು. ನಿವೃತ್ತ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ ಧನ್ಯವಾದವಿತ್ತರು. ಐಕ್ಯ ಮಂತ್ರದೊಂದಿಗೆ ಕಾರ್ಯಕ್ರಮ ಸುಸಂಪನ್ನಗೊಂಡಿತ್ತು.













