32.1 C
Udupi
Wednesday, April 22, 2026
spot_img
spot_img
HomeBlog"ಎಸ್ ಡಿಪಿಐ ಜೊತೆ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನಿಜ ಬಣ್ಣ ಬಯಲು"

“ಎಸ್ ಡಿಪಿಐ ಜೊತೆ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನಿಜ ಬಣ್ಣ ಬಯಲು”

”ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ಎಸ್ ಡಿಪಿಐ ಬೆಂಬಲದೊಂದಿಗೆ ಅಧಿಕಾರ ಹಿಡಿದ ಕಾಂಗ್ರೆಸ್”-ಶಾಸಕ ವಿ.ಸುನಿಲ್ ಕುಮಾರ್

ಎಸ್ ಡಿಪಿಐ ಜತೆ ನಮಗೆ ಯಾವುದೇ ಸಂಬಂಧ ಇಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನ ನಿಜ ಬಣ್ಣ ಬಯಲಾಗಿದೆ.ಎಸ್ ಡಿಪಿಐ ವಿಚಾರದಲ್ಲಿ ಕಾಂಗ್ರೆಸ್ ನದು ಸದಾ ದ್ವಂದ್ವ ನಿಲುವು. ತನ್ನ ಅನುಕೂಲತೆಗೆ ತಕ್ಕಂತೆ ಈ ಸಂಬಂಧವನ್ನು ನೈತಿಕ ಹಾಗೂ ಅನೈತಿಕವಾಗಿಟ್ಟುಕೊಳ್ಳುವುದು ಕಾಂಗ್ರೆಸ್ ಗೆ ಛಾಳಿಯಾಗಿದೆ. ಈ ಕಾರಣಕ್ಕಾಗಿಯೇ ಎಸ್ಡಿಪಿಐ ಕಾಂಗ್ರೆಸ್ ಬಿ ಟೀಂ ಎಂಬುದು ನಮ್ಮ ವಾದವಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

ರಾಜ್ಯಪಾಲರ ನಿವಾಸಕ್ಕೆ ಬಾಂಗ್ಲಾ ಮಾದರಿಯಲ್ಲಿ ನುಗ್ಗುತ್ತೇವೆ ಎಂದ ಕಾಂಗ್ರೆಸ್ ಎಂಎಲ್ ಸಿ ಐವಾನ್ ಡಿಸೋಜಾ ಅವರ ಹೇಳಿಕೆ ಎಸ್ ಡಿಪಿಐ ಜತೆ ಕಾಂಗ್ರೆಸ್ ಪುನರ್ವಿವಾಹದ ಸೂಚನೆ ಎನ್ನಬಹುದಾಗಿದೆ.
ಈ ಹೊಂದಾಣಿಕೆ ದಕ್ಷಿಣ ಕನ್ನಡ‌ ಹಾಗೂ ಬೇರೆ ಜಿಲ್ಲೆಗಳಿಗೆ ಅಪಾಯದ ಮುನ್ಸೂಚನೆಯಾಗಿದೆ.‌ ಈ ಎರಡು ಪಕ್ಷಕ್ಕೆ ನಿಷೇಧಿತ ಪಿಎಫ್ ಐ‌ ಜತೆಗೆ ಅಂತರ್ ಸಂಬಂಧ ಇತ್ತೆಂಬುದು‌ ಜಗಜ್ಜಾಹೀರಾಗಿದೆ,ಮುಂಬರುವ ದಿನಗಳಲ್ಲಿ ಈ ಅಪಾಯಕಾರಿ ಕೂಟ ಹಿಂದು ಕಾರ್ಯಕರ್ತರು ಹಾಗೂ ಸಂಘಟನೆಗಳಿಗೆ ತೊಂದರೆ ನೀಡುವುದು ನಿಶ್ಚಿತವಾಗಿದ್ದು ಸಮಾಜದ ನೆಮ್ಮದಿಗೆ ಕಂಟಕ ಕಾರಿಯಾಗಿ ಪರಿಣಮಿಸಲಿದೆ‌.‌ಇವರಿಬ್ಬರ ಹಿಡನ್ ಅಜೆಂಡಾ ಸಾರ್ವಜನಿಕವಾಗಿ ಬಯಲುಗೊಳಿಸಬೇಕಿದೆ ಎಂದು ಶಾಸಕ,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page