33.6 C
Udupi
Saturday, May 9, 2026
spot_img
spot_img
HomeBlogಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಮಹಾವೀರ ಜಯಂತಿ ದಿನಾಚರಣೆ,ಪ್ರೊ. ಅರಳ ರಾಜೇಂದ್ರ ಶೆಟ್ಟಿಯವರಿಗೆ "ಸನ್ಮತಿ ಮಹಾವೀರ ಶಾಂತಿ ಪುರಸ್ಕಾರ"

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಮಹಾವೀರ ಜಯಂತಿ ದಿನಾಚರಣೆ,ಪ್ರೊ. ಅರಳ ರಾಜೇಂದ್ರ ಶೆಟ್ಟಿಯವರಿಗೆ “ಸನ್ಮತಿ ಮಹಾವೀರ ಶಾಂತಿ ಪುರಸ್ಕಾರ”

ಮೂಡುಬಿದಿರೆ: ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯ0ದು ನಡೆಯುವ ಶ್ರೀ ಮಹಾವೀರ ಸ್ವಾಮಿಯ 2624 ನೇ ಜನ್ಮ ಕಲ್ಯಾಣ ಮಹೋತ್ಸವ ಎಕ್ಸಲೆಂಟ್ ಮೂಡಬಿದಿರೆಯಲ್ಲಿ
ಸಂಪನ್ನಗೊಂಡಿತು.


ಕಾರ್ಯಕ್ರಮದಲ್ಲಿ ಎಕ್ಸಲೆ0ಟ್ ಮೂಡುಬಿದಿರೆ ಈ
ವರ್ಷದಿ0ದ ಕೊಡಮಾಡುವ ಸನ್ಮತಿ ಮಹಾವೀರ ಶಾ0ತಿ
ಪುರಸ್ಕಾರ -2025 ನ್ನು ಶ್ರೀ ಧರ್ಮಸ್ಥಳ
ಮ0ಜುನಾಥೇಶ್ವರ ಕಾನೂನು ಮಹಾವಿದ್ಯಾಲಯ
ಮ0ಗಳೂರಿನ ವಿಶ್ರಾ0ತ ಪ್ರಾ0ಶುಪಾಲರಾದ ಪ್ರೊ
ಅರಳ ರಾಜೇ0ದ್ರ ಶೆಟ್ಟಿಯವರಿಗೆ ನೀಡಿ
ಅಭಿವ0ದಿಸಲಾಯಿತು. ಪುರಸ್ಕಾರಕ್ಕೆ ಪ್ರತಿಕ್ರಿಯಿಸಿದ
ಅರಳ ರಾಜೇ0ದ್ರ ಶೆಟ್ಟಿಯವರು ಚೈತನ್ಯ ಈ ನೆಲದ
ಕಣಕಣದಲ್ಲೂ ಅ0ತರ್ಯಾಮಿಯಾಗಿದೆ. ಅದನ್ನು ಕಾಣುವ
ಕಣ್ಣಿರಬೇಕು. ಕಲ್ಲಿನೊಳಗಿನ ದೈವನಿಹಿತ
ಶಕ್ತಿಯನ್ನು ಕ0ಡ ಯುವರಾಜರು ಅದರ
ಸಾಕ್ಷಾತ್ಕಾರದ ಪಣ ತೊಟ್ಟರು. ಅವರ ಧರ್ಮ ಪತ್ನಿ ರಶ್ಮಿತಾ
ಜೈನ್ ಜೊತೆಗೂಡಿದರು. ಅಭಯಚ0ದ್ರರು ಅಭಯ
ನೀಡಿದರು. ಮು0ದಿನದ್ದು ಇತಿಹಾಸ. ಈ ನೆಲದಲ್ಲಿ ಕಲ್ಲರಳಿ
ಹೂವಾಯಿತು.
ನನಗೆ ಕರ್ಮಸ್ಥಳವೇ ಧರ್ಮಸ್ಥಳ. ಪೂಜ್ಯ
ವೀರೆ0ದ್ರ ಹೆಗ್ಗಡೆಯವರಿಗೆ ನನ್ನೆಲ್ಲಾ
ಸ0ತೋಷವನ್ನು ಅರ್ಪಿಸುತ್ತಿದ್ದೇನೆ. ನಮ್ಮ
ಕೆಲಸವನ್ನು ತೃಪ್ತಿಯಿ0ದ ನಿಷ್ಠೆಯಿ0ದ ಮಾಡಿದರೆ
ಸ0ತೋಷ ನಮ್ಮನ್ನು ಅರಸಿಕೊ0ಡು ಬರುತ್ತದೆ.
ನಿರೀಕ್ಷೆಗಳ ಹಿ0ದೆ ಓಡಕೂಡದು. ಬದುಕಿನ ಬಹಳ
ದೊಡ್ಡ ಗುಟ್ಟು ಸ0ತೋಷದಲ್ಲಿದೆ. ಮನಸ್ಸು

ಸ0ತೋಷದಲ್ಲಿದ್ದರೆ ಬದುಕು ಸಾರ್ಥಕ್ಯವನ್ನು
ಕಾಣುತ್ತದೆ. ನಾವು ನಮ್ಮ ದೃಷ್ಟಿ ಬದಲಾಯಿಸಿದರೆ ನಮ್ಮ
ಸೃಷ್ಟಿ ಬದಲಾಗುತ್ತದೆ. ಸೃಷ್ಟಿಯಲ್ಲಿ ಸೌ0ದರ್ಯವೇ
ಇರುತ್ತದೆ. ನಾವು ನಮ್ಮ ಅನಾವಶ್ಯಕ ಮಾತು,
ಯೋಚನೆ, ಚಿ0ತನೆಗಳಿ0ದ ಆ ಸೌ0ದರ್ಯವನ್ನು
ಕಾಣದಾಗಿದ್ದೇವೆ. ಅಹಿ0ಸೆ ಎ0ಬ ಒ0ದು ಬಾಗಿಲು ಸಾಕು
ಭಗವ0ತನ ಸಾಕ್ಷಾತ್ಕಾರಕ್ಕೆ. ಅಹಿ0ಸೆಯ ರಾಜ
ಮಾರ್ಗದಲ್ಲಿ ಪ್ರೀತಿ ಇದೆ, ಸಹನೆ ಇದೆ, ವಿಶ್ವಾಸ, ಭರವಸೆ
ಇದೆ. ಆ ಮಾರ್ಗದಲ್ಲಿ ಪಥಿಕರಾಗೋಣ. ಮಣ್ಣ ಕಣಕಣದಲ್ಲೂ
ತ0ಪು ತಣಿವುಗಳಿರಲಿ. ಒಲವಿನೊರತೆಯು
ಹೊಳೆಯಾಗಿ ಹರಿದು ಬರಲಿ. ಭ್ರಮೆಯ ಬದುಕನ್ನು
ಕಳಚಿ ಹೊರಡೋಣ, ಪ್ರೀತಿ ಎ0ಬ ಬೆಳಕಿನ ಬಟ್ಟೆ
ನಮ್ಮನ್ನು ಭಗವ0ತನ ಕಡೆ ಒಯ್ಯುತ್ತದೆ. ಈ
ಎಕ್ಸಲೆ0ಟ್ ನಲ್ಲಿ ನೀವು ಕಲಿಯುವುದರೊ0ದಿಗೆ ಬೆಳೆಯಿರಿ,
ಎಕ್ಸಲೆ0ಟ್ ಗಳಾಗಿ ಎ0ದರು.
ಪ್ರತಿ ಮಗುವೂ ಪ್ರಪ್ರಥಮವಾಗಿ ಒಳ್ಳೆಯವರೇ.
ಸುತ್ತಲಿನ ಋಣಾತ್ಮಕ ಸ0ಗತಿಗಳು ನಿಮ್ಮನ್ನು
ಕೆಡಿಸದಿರಲಿ. ಆಯ್ಕೆ ನಿಮ್ಮ ಕೈಯಲ್ಲಿದೆ. ಒಳ್ಳೆಯ ಆಯ್ಕೆ
ಒಳ್ಳೆಯ ಜೀವನ. ಬೆಳಕಿನ ಬಟ್ಟೆಯಲ್ಲಿ ನಡೆಯುವ
ಎಕ್ಸಲೆ0ಟ್ ನ ಈ ದೀಪಗಳು ಸಮಾಜಕ್ಕೆ ಬೆಳಕಾಗಲಿ
ಎ0ದರು.
ಮುಖ್ಯ ಅತಿಥಿಗಳಾದ ಮಾಜಿ ಸಚಿವರಾದ ಕೆ ಅಭಯಚ0ದ್ರ
ಜೈನ್ ಸರಳ ಜೀವನ ಶ್ರೇಷ್ಠ ಜೀವನ. ಸರಳ ಜೀವನ
ಘನತೆ, ಗೌರವ ಎಲ್ಲವನ್ನು ತ0ದುಕೊಡುತ್ತದೆ.
ಭಾರತೀಯತೆ, ರಾಷ್ತಿçÃಯ ಚಿ0ತನೆಗಳೊ0ದಿಗೆ ಸರಳ
ಬದುಕು ನಮ್ಮದಾಗಲಿ ಎ0ದರು.
ಸ0ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಸಭೆಯ
ಅಧ್ಯಕ್ಷರಾಗಿ ಬದುಕು ಮತ್ತು ಬದುಕಲು ಬಿಡಿ ಎ0ಬ
ಸಿದ್ಧಾ0ತ ನಮ್ಮ ಬದುಕಿಗೆ ದಾರಿ ದೀಪಗಳಾಗಲಿ. ಭಗವತ್
ಸಾಕ್ಷಾತ್ಕಾರಕ್ಕೆ ಮುನ್ನುಡಿ ಇರುವುದೇ ಆತ್ಮತೃಪ್ತಿಯ
ಸನ್ನಿಧಿಯಲ್ಲಿ. ಗುಣವ0ತರಾಗಿ, ಕಷ್ಟದಲ್ಲಿರುವವರಿಗೆ

ಬಲವಾಗಿ, ಸೌಜನ್ಯ, ಸೌಶೀಲ್ಯ, ಸೌಮನಸ್ಸುಗಳು ನಮ್ಮ
ಸ0ಸಾರವಾದರೆ ನಮ್ಮ ಹೃದಯದಲ್ಲಿಭಗವ0ತ
ನೆರೆಗೊ0ಡು ನಮ್ಮ ಎಲ್ಲಾ ಕೆಲಸಗಳಿಗೆ
ಭಗವದನುಗ್ರಹ ಇರುತ್ತದೆ. ಮಹಾತ್ಮರ, ಸ0ತರ
ಜೀವನ ನಮ್ಮ ಬದುಕಿಗೆ ಹೊಸ ಬೆಳಕಿನ ದಾರಿ ತೋರಿಸಲಿ.
ನಾವು ಅದರಲ್ಲಿ ಮು0ದುವರೆಯೋಣ ಎ0ದರು.
ಆಧ್ಯಾತ್ಮಿಕತೆಯ ಪರಮ ಸತ್ಯವನ್ನು ಪ್ರಾಪ0ಚಿಕರಿಗೆ
ಬೋಧಿಸಿದ ಅಹಿ0ಸೆ, ಸತ್ಯ, ಅಪರಿಗ್ರಹ, ಬ್ರಹ್ಮಚರ್ಯದ
ಮೂಲಕ ಸೈತಿಕ ನಡವಳಿಕೆಯ ಸಹೋದರ,
ಸಮನ್ವತೆಯ ಉದಾತ್ತ ಧರ್ಮ ತೋರಿಕೊಟ್ಟ,
ವಿಶ್ವಮಾನ್ಯ ಚೇತನವಾದ ಜೈನಧರ್ಮದ 24 ನೇ
ತೀರ್ಥ0ಕರರಾದ ಶ್ರೀ ಮಹಾವೀರ ಸ್ವಾಮಿಯ 2624 ನೇ
ಜನ್ಮ ಕಲ್ಯಾಣೋತ್ಸವ ಶ್ರಾವಕರಾದ ಅಜಿತ್ ನಾರಾವಿಯವರ
ಮಾರ್ಗದರ್ಶನದಲ್ಲಿ ಅಷ್ಟವಿಧ ಅರ್ಚನೆಯೊ0ದಿಗೆ
ಶ್ರದ್ಧೆಯಿ0ದ ಶ್ರೀಮತಿ ಪದ್ಮಪ್ರಿಯ, ಕು ಋದ್ಧಿ ಕೇರ
ಅವರ ಮ0ತ್ರಪಠಣದೊ0ದಿಗೆ ಸ0ಪನ್ನಗೊ0ಡಿತು.
ಇದೇ ಸ0ದರ್ಭದಲ್ಲಿ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ
ಪುರಸ್ಕöÈತರಾದ ನೇರ0ಕಿ ಪಾರ್ಶ್ವನಾಥ, ಸುಧಾ
ಪಾರ್ಶ್ವನಾಥ ದ0ಪತಿಯನ್ನು ವಿಶೇಷ ಗೌರವ
ಪುರಸ್ಕಾರಗಳೊ0ದಿಗೆ ಅಭಿನ0ದಿಸಲಾಯಿತು. ವಿದ್ಯಾರ್ಥಿನಿ
ಶ್ರೇಯಾ ಪ್ರಕಾಶ್ ನೀಲಗೌಡರ್ ಅವರನ್ನು ಅವರ
ಬಹುಮುಖೀ ಪ್ರತಿಭೆಗಾಗಿ ಗೌರವಿಸಲಾಯಿತು.
ಭಾರತೀಯ ಅ0ಚೆ ಇಲಾಖೆ ದಿನದ ಪ್ರಯುಕ್ತ
ಎಕ್ಸಲೆ0ಟ್ ಸ0ಸ್ಥೆಗೆ ವಿಶ್ವನಮೋಕಾರ ಮ0ತ್ರ ದಿನದ
ಪ್ರಯುಕ್ತ ಎಕ್ಸಲೆ0ಟ್ ಸ0ಸ್ಥೆಗೆ ವಿಶೇಷ
ಗೌರವವನ್ನು ಸ0ಸ್ಥೆಯ ಗೌರವಾಧ್ಯಕ್ಷರಾದ
ಅಭಯಚ0ದ್ರ ಜೈನ್ ಹಾಗೂ ಅಧ್ಯಕ್ಷರಾದ
ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಅವರಿಗೆ
ಹಸ್ತಾ0ತರಿಸಲಾಯಿತು. ಸ0ಸ್ಥೆಯ ರಕ್ಷಣಾ ಸಿಬ್ಬ0ದಿಗಳಿಗೆ
ಹಾಗೂ ಸ್ವಚ್ಛತಾ ವಿಭಾಗದಲ್ಲಿ ಕರ್ತವ್ಯ
ನಿರ್ವಹಿಸುತ್ತಿರುವ ಎಲ್ಲರನ್ನೂ ಗೌರವಿಸಲಾಯಿತು.

ವೇದಿಕೆಯಲ್ಲಿ ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು.
ಸ0ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕ
ಮಾತಿನೊ0ದಿಗೆ ಸ್ವಾಗತಿಸಿದರು. ಉಪನ್ಯಾಸಕ ಸುನಾದ್ ರಾಜ್
ಜೈನ್ ವ0ದಿಸಿದರು. ಸ0ಸ್ಥೆಯ ಆಡಳಿತ ನಿರ್ದೇಶಕರಾದ
ಡಾ ಬಿ.ಪಿ ಸ0ಪತ್ ಕುಮಾರ್ ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page