
ಅಂತರಾಷ್ಟ್ರೀಯ ಹೃದಯ ದಿನಾಚರಣೆಯ ಅಂಗವಾಗಿ ಆದರ್ಶ ಸಮೂಹ ಸಂಸ್ಥೆಗಳು ಮತ್ತು ಆದರ್ಶ ಆಸ್ಪತ್ರೆ ಉಡುಪಿ ಇವರ ಆಶ್ರಯದಲ್ಲಿ ನಡೆದ ಕ್ವಿಜ್‌ನಲ್ಲಿ ಉಡುಪಿ ಜ್ಞಾನಸುಧಾ ಪದವಿ
ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅನಮಯ ಯೋಗೀಶ್ ದಿವಾಕರ್ ಮತ್ತು ಅನಿರುದ್ಧ್ ರವಿರಾಜ್ ಉಡುಪ ಇವರು ದ್ವಿತೀಯ ಸ್ಥಾನ ಪಡೆದು ರೂ.2000 ನಗದು ಪುರಸ್ಕಾರ ಪಡೆದಿರುತ್ತಾರೆ.
ಇವರನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.













