28.1 C
Udupi
Thursday, May 7, 2026
spot_img
spot_img
HomeBlogಅಂಗನವಾಡಿಯಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ ಮತ್ತು ಚಿಕನ್‌ ಫ್ರೈ ನೀಡುವಂತೆ ಬಾಲಕನ ಮನವಿ: ಅಸ್ತು ಎಂದ...

ಅಂಗನವಾಡಿಯಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ ಮತ್ತು ಚಿಕನ್‌ ಫ್ರೈ ನೀಡುವಂತೆ ಬಾಲಕನ ಮನವಿ: ಅಸ್ತು ಎಂದ ಆರೋಗ್ಯ ಸಚಿವೆ ವೀಣಾ ಜಾರ್ಜ್‌

ತಿರುವನಂತಪುರಂ: ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಬಾಲಕನೊಬ್ಬ ಅಂಗನವಾಡಿಯಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ ಮತ್ತು ಚಿಕನ್‌ ಫ್ರೈ ನೀಡುವಂತೆ ಮನವಿ ಮಾಡಿದ್ದ ವಿಡಿಯೋ ಬರಿ ವೈರಲ್ ಆಗಿದ್ದು ಇದೀಗ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಶಂಕು ಎಂಬ ಬಾಲಕ ಮುಗ್ಧ ರೀತಿಯಲ್ಲಿ ತನ್ನ ಅಂಗನವಾಡಿಯಲ್ಲಿ ರುಚಿಕರ ಊಟ ಬೇಕು ಎಂದು ಕೇಳಿಕೊಂಡಿದ್ದು ಈ ವಿಡಿಯೋ ಜನವರಿ 30ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಭಾರಿ ವೈರಲಾಗಿತ್ತು. ಕೊನೆಗೆ ಈ ವೀಡಿಯೊ ಸಚಿವರ ಗಮನಕ್ಕೆ ಬಂದಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಅವರು ಅಂಗನವಾಡಿಗಳಲ್ಲಿನ ಆಹಾರ ಮೆನುವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು. ಕೇರಳದಲ್ಲಿ ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲು ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಪೋಷಣೆಗೆ ಪೂರಕವಾಗಿ ಊಟ ನೀಡಲಾಗುತ್ತಿದೆ. ಮೊಟ್ಟೆ ಮತ್ತು ಹಾಲನ್ನು ಸಹ ಸರ್ಕಾರ ನೀಡುತ್ತಿದೆ. ಮಕ್ಕಳು ಪೌಷ್ಟಿಕ ಆಹಾರದಿಂದ ಆರೋಗ್ಯದ ಪ್ರಯೋಜನ ಪಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page