
ಕಾರ್ಕಳ: ಹಿಂದಿ ಒಲಿಂಪಿಯಾಡ್ ವತಿಯಿಂದ ಆಯೋಜಿಸಿದ ಅಂತರಾಷ್ಟ್ರೀಯ ಹಿಂದಿ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ಎಂಟನೇ ತರಗತಿ ವಿದ್ಯಾರ್ಥಿನಿ ಶ್ರೀಶಾನ್ಯ ಪೂಜಾರಿ ಚಿನ್ನದ ಪದಕವನ್ನು,ಆದ್ಯ ಎನ್.ನಾಯಕ್ ಏಳನೇ ತರಗತಿ ಕಂಚಿನ ಪದಕವನ್ನು ಹಾಗೂ ಅದೀಕ್ಷಿತ್ ಐದನೇ ತರಗತಿ ಕಂಚಿನ ಪದಕವನ್ನು ಪಡೆದಿರುತ್ತಾರೆ.ಇವರಿಗೆ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ ಹಾಗು ಶಿಕ್ಷಕ ವೃಂದ ಶುಭ ಹಾರೈಸಿರುತ್ತಾರೆ.




















