32.5 C
Udupi
Monday, April 27, 2026
spot_img
spot_img
HomeBlogಹವಾಮಾನ ವೈಪರೀತ್ಯ: ಅನ್ನ–ನೀರಿನ ಕೊರತೆ ಸಾಧ್ಯತೆ, ಕೋಡಿ ಮಠದ ಸ್ವಾಮೀಜಿ ಎಚ್ಚರಿಕೆ

ಹವಾಮಾನ ವೈಪರೀತ್ಯ: ಅನ್ನ–ನೀರಿನ ಕೊರತೆ ಸಾಧ್ಯತೆ, ಕೋಡಿ ಮಠದ ಸ್ವಾಮೀಜಿ ಎಚ್ಚರಿಕೆ

ಮದ್ದೂರು: ತಾಲೂಕಿನ ಚಾಮನಹಳ್ಳಿಯಲ್ಲಿ ನಡೆದ ಶ್ರೀ ಬಂಡೆ ಶನೈಶ್ಚರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹವಾಮಾನದಲ್ಲಿನ ಅಸಾಮಾನ್ಯ ಬದಲಾವಣೆಗಳ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ ಮತ್ತು ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ಪ್ರಕೃತಿಯ ಸಮತೋಲನದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದು, ಇದರ ಪರಿಣಾಮ ಜನಜೀವನದ ಮೇಲೆ ಬೀಳಲಿದೆ ಎಂದು ಅವರು ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯದಿಂದ ಪರಿಸರದಲ್ಲಿ ಹಲವು ಬದಲಾವಣೆಗಳು ಆಗುತ್ತಿದ್ದು ಅಪಮೃತ್ಯುಗಳ ಪ್ರಮಾಣವೂ ಹೆಚ್ಚುವ ಸಂಭವವಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು. ಆದರೆ ರಾಜ್ಯ ಮಟ್ಟದಲ್ಲಿ ದೊಡ್ಡ ಸಮಸ್ಯೆಗಳು ಎದುರಾಗುವ ಲಕ್ಷಣಗಳಿಲ್ಲವೆಂದು ತಿಳಿಸಿದರು. ಇತ್ತೀಚೆಗೆ ಜನರು ಹೆಚ್ಚಿನ ಪ್ರಮಾಣದಲ್ಲಿ ದೈವಭಕ್ತಿಗೆ ಮೊರೆ ಹೋಗುತ್ತಿರುವುದರಿಂದ ಮಳೆಯೂ ಉತ್ತಮವಾಗಿ ಆಗಿ, ಬೆಳೆಗಳು ಚೆನ್ನಾಗಿ ಬೆಳೆಯುತ್ತಿದ್ದು, ಜನರು ಸಮೃದ್ಧ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page