
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ತೀವ್ರ ಬಿಸಿಲಿನ ವಾತಾವರಣವಿದೆ. ಇಂದು ಸಹ ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜ್ಯದ ಕೆಲವೆಡೆ ಕಳೆದ ಎರಡು ದಿನಗಳಿಂದ ಬಿಸಿ ಗಾಳಿ ಬೀಸಿದ ಅನುಭವ ಕೂಡ ಜನರ ಅರಿವಿಗೆ ಬಂದಿದೆ. ಮುಂದಿನ ಒಂದು ವಾರ ಗರಿಷ್ಠ ಉಷ್ಣಾಂಶ 2ರಿಂದ 3 ಡಿಗ್ರಿ ಏರಿಕೆ ಆಗಲಿದೆ ಎಂದು ಇಲಾಖೆ ತಿಳಿಸಿದೆ.