
ಕಾರ್ಕಳ: ಇಂದು ಬೆಳಗ್ಗೆ 6.30 ರಿಂದ 8.30 ರವರೆಗೆ ಶ್ರೀ ರಾಘವೇಂದ್ರ ಮಠದ ಆವರಣ, ಕಾರ್ಕಳದಲ್ಲಿ ಗೋವುಗಳಿಗಾಗಿ ನೆಪಿಯರ್ ಮೇವು ಹುಲ್ಲು ಹಾಗೂ ವಿವಿಧ ಜಾತಿಯ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.

ಈ ಹಿಂದೆ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಚಾಲನೆ ನೀಡಿದ್ದ ಈ ಅಭಿಯಾನದ ಮುಂದುವರಿದ ಭಾಗವಾಗಿ, ಮಠದ ಬಳಿಯ ಜಾಗವನ್ನು ಹಿಟಾಚಿ ಯಂತ್ರದ ಸಹಾಯದಿಂದ ಸಮತಟ್ಟುಗೊಳಿಸಿ, ನಂತರ ರಾಯರ ಮಠದ ಸುತ್ತಮುತ್ತಲಿನ ಪರಿಸರದಲ್ಲಿ ಸುಮಾರು 19 ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೆಪಿಯರ್ ಮೇವು ಹುಲ್ಲಿನ ನೆಡುವ ಕಾರ್ಯಕ್ಕೆ ಸಿದ್ಧಗೊಳಿಸಲಾಯಿತು.

ಈ ಶ್ರಮದಾನ ಕಾರ್ಯಕ್ರಮದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಅನೇಕ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ಸೇವೆ ಸಲ್ಲಿಸಿದರು.








































