
ಸ್ವಚ್ಛ ಕಾರ್ಕಳ ಬ್ರಿಗೇಡ್ ಮುಂದಾಳತ್ವದಲ್ಲಿ, ಶ್ರೀಲಕ್ಷ್ಮಿ ಗೆಳೆಯರ ಬಳಗ ದುರ್ಗ ಸೇತುವೆ – ಕಾವೇರಡ್ಕ ಇದರ ಸಹಯೋಗದೊಂದಿಗೆ ಗೋವಿಗಾಗಿ ಮೇವು ಕಾರ್ಯಕ್ರಮವು ದಿನಾಂಕ 29 ರ ಭಾನುವಾರ ಬೆಳಿಗ್ಗೆ 6:30 ರಿಂದ 9 :00 ರ ವರೆಗೆ ಕಾರ್ಕಳದ ಕುಕ್ಕುಂದೂರಿನ ತೋಟಗಾರಿಕಾ ಇಲಾಖೆಯ ಫಾರ್ಮಿನಲ್ಲಿ ಜರುಗಿತು.

ಇಲ್ಲಿಂದ ಸಂಗ್ರಹಿಸಿದ ಒಂದು ಟಿಪ್ಪರ್ ಹಸಿಹುಲ್ಲನ್ನು ಕಾರ್ಕಳ ಬಂಡಿಮಠದ ಬಳಿ ಇರುವ ಶ್ರೀಅನಂತಕೃಷ್ಣ ಗೋಶಾಲೆಗೆ ಸಮರ್ಪಿಸಲಾಯಿತು.
ಗೋಶಾಲೆಯ ವ್ಯವಸ್ಥಾಪಕರು ತಂಡದ ಎಲ್ಲಾ ಸದಸ್ಯರನ್ನು ಅಭಿನಂದಿಸಿ, ಇಂತಹ ಪವಿತ್ರ ಮತ್ತು ಪುಣ್ಯ ಕಾರ್ಯ ಮಾಡಿದಕ್ಕಾಗಿ ದೇವರು ಸರ್ವ ಸದಸ್ಯರಿಗೂ ಸನ್ಮಂಗಳವುಂಟುಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ, ತಂಡದ ಸದಸ್ಯರಿಗೆ ಗೋಪೂಜೆ ಮಾಡುವ ಅವಕಾಶ ಕಲ್ಪಿಸಿಕೊಟ್ಟರು.
ಇಂದಿನ ಟಿಪ್ಪರ್ ವಾಹನದ ಪ್ರಯೋಜಕರಾದ ಹಾಡಿಮನೆ ಸುರೇಂದ್ರ ನಾಯಕ್, ಕುಕ್ಕುಂದೂರು,ಇವರಿಗೆ ತಂಡದ ಪರವಾಗಿ ಧನ್ಯವಾದಗಳು.
ಪ್ರತಿ ಭಾನುವಾರ ನಡೆಯುವ ಈ ಅಭಿಯಾನಕ್ಕೆ ಇನ್ನೂ ಹೆಚ್ಚಿನ ಸಂಘಟನೆಗಳು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ತಂಡ ಮನವಿ ಮಾಡಿಕೊಂಡಿದೆ.














