5 ವರ್ಷಗಳಿಂದ, ಸ್ವಚ್ಛತಾ ಕ್ರಾಂತಿ ಮೂಡಿಸಿದ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಕಾರ್ಯ ಶ್ಲಾಘನೀಯ: ಶರ್ಮಿಳಾ ಸಿ.ಎಸ್

ಕಾನೂನು ಸೇವೆಗಳ ಸಮಿತಿ, ಕಾರ್ಕಳ ತಾಲೂಕು ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ಇವರ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಸ್ವಚ್ಛತಾ ಜಾಥ ಇಂದು ಅಯ್ಯಪ್ಪ ನಗರ ಆಟೋ ನಿಲ್ದಾಣದಿಂದ ವಿಜೇತ ವಿಶೇಷ ಶಾಲೆಯವರೆಗೆ ಬೆಳಿಗೆ 8 ಗಂಟೆಯಿಂದ – 9 ಗಂಟೆಯವರೆಗೆ ನಡೆಯಿತು.
ಸ್ವಚ್ಛತಾ ಅಭಿಯಾನದಲ್ಲಿ ಕಾರ್ಕಳ ಹಿರಿಯ ನ್ಯಾಯದೀಶೆ ಶರ್ಮಿಳಾ ಸಿ.ಎಸ್ ಪ್ರಧಾನ ಸಿವಿಲ್ ನ್ಯಾಯದೇಶೆ ಕೋಮಲ ಆರ್. ಸಿ, ಹೆಚ್ಚುವರಿ ಸಿವಿಲ್ ನ್ಯಾಯದೇಶರಾದ ಅಬುತಾಹೀರ್, ವಕೀಲರ ಸಂಘದ ಉಪಾದ್ಯಕ್ಷರು ಕೆ ಹರೀಶ್ ಅಧಿಕಾರಿ, ನ್ಯಾಯಾಲಯದ ಸಿಭಂದಿ ಸ್ವಚ್ಛತಾ ಅಭಿಯಂದಲ್ಲಿ ಭಾಗವಹಿಸಿದರು.
ಕಳೆದ ೫ ವರ್ಷಗಳಿಂದ ಕಾರ್ಕಳ ತಾಲೂಕಿನಲ್ಲಿ ಸ್ವಚ್ಛತಾ ಕ್ರಾಂತಿ ಮೂಡಿಸಿದ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಕಾರ್ಯವನ್ನು ಶ್ಲಾಗಿಸಿ ಎಲ್ಲರೂ ಇವರಿಂದ ಪ್ರೇರಿತರಾಗಬೇಕೆಂದು ಹಿರಿಯ ಸಿವಿಲ್ ನ್ಯಾಯದೀಶೆ ಶರ್ಮಿಳಾ ಸಿ ಎಸ್ ಅವರು ಹೇಳಿದರು.













