
ಕೆಲವು ದಿನಗಳಿಂದ ಕೇಂದ್ರ ಮತ್ತು ರಾಜ್ಯ ಎರಡರಲ್ಲಿಯೂ ರಾಜಕೀಯ ವ್ಯಕ್ತಿಗಳ ಕೆಸರೆರೆಚಾಟ ಹೆಚ್ಚಾಗುತ್ತಲೇ ಸಾಗುತ್ತಿದ್ದು ಇದೀಗ ಖ್ಯಾತ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಅವರು ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಇದು ಭಯೋತ್ಪಾದನೆಯಲ್ಲ. ವಾಸ್ತವ.ಯಾವ ಜಾತಕದಲ್ಲಿ ಗುರು ಉಚ್ಚ ಕ್ಷೇತ್ರಗತನಾಗಿರುತ್ತಾನೋ, ಅದರಲ್ಲೂ ತನ್ನ ತ್ರಿಕೋಣಕ್ಕೇ ಅಂಶ ಕೊಟ್ಟಿರುತ್ತಾನೋ ಅಂತವರಿಗೆ ಅನ್ಯಾಯ ಮಾಡಿದರೆ ಪೋಲೀಸರೇ ಆಗಲಿ,ಆಡಳಿತಗಾರರೇ ಆಗಲಿ,ಸಾರ್ವಜನಿಕರೇ ಆಗಲೀ ಆ ಲೆಕ್ಕಾಚಾರ ಇಲ್ಲ.ಅವರು ಆರು ತಿಂಗಳೊಳಗೆ ಪುತ್ರ ನಷ್ಟ ಹೊಂದುತ್ತಾರೆ.ಇದು ಜ್ಯೋತಿಷ್ಯದೊಳಗಿನ ಧರ್ಮ ಸೂಕ್ಷ್ಮಗಳು. ಇವರಲ್ಲಿ ಆಕಾಶ ತತ್ವ ಇರುತ್ತದೆ. ಇಂಥವರು ಖಂಡಿತ ಅನ್ಯಾಯ ಮಾಡಲ್ಲ.ಕೆಲವೊಮ್ಮೆ ವಾಸ್ತವ ಸತ್ಯವನ್ನು ಕಟುವಾಗಿ ಹೇಳಬಹುದಷ್ಟೆ. ಈಗಿನ ಉದಾಹರಣೆ ಹೇಳೋದಿಲ್ಲ. ಮಹಾಭಾರತದಲ್ಲಿ ಶ್ರೀ ಕೃಷ್ಣನಿಗೆ, ರಾಮಾಯಣದಲ್ಲಿ ಶ್ರೀ ರಾಮನಿಗೆ ಇಂತಹ ಮಹಾ ಯೋಗವಿತ್ತು. ಅದೇನಾದರೂ ಕೇಂದ್ರದ ಗುರು ಆಗಿದ್ದರೆ ಹಂಸ ಮಹಾಯೋಗವೂ ಇರುತ್ತದೆ. ನಾವು ಜಾತಕ ನೋಡಿ ಅನ್ಯಾಯ ಮಾಡಬಹುದೋ ಎಂದು ಲೆಕ್ಕ ಹಾಕಲಾಗುತ್ತದೆಯೇ? ಸಂದೇಶ ಇಷ್ಟೆ. ಒಬ್ಬ ಅಸಂಖ್ಯಾತ ಅಭಿಮಾನಿಗಳನ್ನು ಪಡೆದವ, ಸತ್ಕರ್ಮ ನಿರತನು ಆಗಿದ್ದವನಿಗೆ ಆಗಲೀ ಅಥವಾ ಯಾರಿಗೇ ಆಗಲಿ ಅನ್ಯಾಯ ಮಾಡಬಾರದು ಎಂಬುದೇ ಮುಖ್ಯ ಸಂದೇಶ’ ಎಂದು ಬರೆದುಕೊಂಡಿದ್ದಾರೆ.
ಇವರು ಬರೆದಿರುವ ಪ್ರಕಾರ ಅಧರ್ಮಿಗಳಿಗೆ ಇನ್ನಾರು ತಿಂಗಳಿನಲ್ಲಿ ಫಲಿತಾಂಶ ತಿಳಿಯುತ್ತದೆ. ಅನ್ಯಾಯ ಮಾಡುವವರಿಗೆ ಅನ್ಯಾಯವೇ ಆಗುತ್ತದೆ. ಅಸಂಖ್ಯಾತ ಅಭಿಮಾನಿಗಳನ್ನು ಪಡೆದವ, ಸತ್ಕರ್ಮ ನಿರತನು ಆಗಿದ್ದವನಿಗೆ ಅನ್ಯಾಯ ಎಸಗಿದರೆ, ಅವರಿಗೆ ತಕ್ಕ ಶಿಕ್ಷೆಯಾಗುತ್ತದೆ ಎನ್ನುವುದು.