
ಕಾರ್ಕಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ( ರಿ.) ಸೂರಾಲು ಇದರ ವತಿಯಿಂದ ನಡೆಯಲಿರುವ 32ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಕ್ರೀಡೋತ್ಸವ -2024 ಆಗಸ್ಟ್ 11ರಂದು ಸೂರಾಲು ಗುಂಡಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿರುವುದು.
ಬೆಳಿಗ್ಗೆ ಗಂಟೆ 8:30 ರಿಂದ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ಮಧ್ಯಾಹ್ನ ಗಂಟೆ 1:30 ರಿಂದ ಸಾರ್ವಜನಿಕ ಯುವಕರ ವಾಲಿಬಾಲ್ ಪಂದ್ಯಾಟ ಸಾಯಂಕಾಲ ಗಂಟೆ 4:00 ರಿಂದ ಸಾರ್ವಜನಿಕ ಯುವಕ ಯುವತಿಯರ ಹಗ್ಗ ಜಗ್ಗಾಟ ಸ್ಪರ್ಧೆ ಹಾಗೂ ಇನ್ನಿತರ ಆಕರ್ಷಕ ಸ್ಪರ್ಧೆಗಳು ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













