21.1 C
Udupi
Tuesday, February 17, 2026
spot_img
spot_img
HomeBlogಸಿ.ಟಿ ರವಿ ಅವಾಚ್ಯ ಶಬ್ದ ಬಳಸಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ವಿಡಿಯೋ ಮತ್ತು ಆಡಿಯೋ ಸಾಕ್ಷಿ ಇದೆ:...

ಸಿ.ಟಿ ರವಿ ಅವಾಚ್ಯ ಶಬ್ದ ಬಳಸಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ವಿಡಿಯೋ ಮತ್ತು ಆಡಿಯೋ ಸಾಕ್ಷಿ ಇದೆ: ಸಿಎಂ ಸಿದ್ದರಾಮಯ್ಯ

spot_imgspot_img

ಕಲಬುರಗಿ: ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರಿಗೆ ಅವಾಚ್ಯ ಶಬ್ದ ಬಳಸಿದ ಕುರಿತು ವಿಡಿಯೋ, ಆಡಿಯೋ ಕ್ಲಿಪಿಂಗ್ ಸಾಕ್ಷ್ಯ ಇದೆ ಎಂದು ಹೇಳಿದ್ದಾರೆ.

ಸಿ.ಟಿ. ರವಿ ಅವಾಚ್ಯ ಶಬ್ದ ಬಳಸಿದ್ದು ಸತ್ಯ. ಸದನದ ಸದಸ್ಯರು ಅದಕ್ಕೆ ಸಾಕ್ಷಿ‌ ಇದ್ದಾರೆ. ಸಿ.ಟಿ.ರವಿ ಬಳಸಿದ ಪದ ಅತ್ಯಂತ ಅನಾಗರಿಕವಾಗಿದ್ದು ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿ ಆಗಿದ್ದ ರವಿ ಬಾಯಲ್ಲಿ ಇಂಥಾ ಮಾತು ಬರುವುದು ನಾಚಿಕೆಗೇಡಿನದ್ದು ಎಂದು ಹೇಳಿದರು.

ಪೊಲೀಸರು ಸಿ.ಟಿ. ರವಿ ಪ್ರಕರಣ ಕುರಿತಂತೆ ತನಿಖೆ ಮಾಡುತ್ತಿದ್ದಾರೆ, ನ್ಯಾಯಾಂಗ ತನಿಖೆ ಯಾಕೆ ಬೇಕು? ಇದು ಕ್ರಿಮಿನಲ್ ಅಪರಾಧ ಪ್ರಕರಣ. ಬಿಜೆಪಿಯವರು ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ನ್ಯಾಯಾಂಗ ತನಿಖೆ ಕೇಳುತ್ತಿದ್ದಾರೆ ಎಂದು ಹೇಳಿದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page