
ಇತ್ತೀಚಿಗೆ ನಡೆದ ‘ಕಾಸ್ಟ್ ಅಂಡ್ ಮ್ಯಾನೇಜ್ ಮೆಂಟ್ ಅಕೌಂಟೆಂಟ್’ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು,ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಸುಜೀತ್ ಯು ನಾಯಕ್ (296),ಆದ್ಯ ಎಸ್ ಪಾಡ್ರೆ (292),ಭೂಮಿಕ ಸುಬ್ಬರಾಯ್ ಹೆಗ್ಡೆ (282),ವರುಣ್ ಚಂದ್ರಶೇಖರ್ ಕಚತ್ತಿ(280)
ಅಕ್ಷರ್ ಎಸ್ ನಾಯಕ್(270),ಅನಿರುದ್ಧ ಕೆ ಕೆ (270),ಸೃಷ್ಠಿ (252),ಹಿತ ರವಿ ಶೆಟ್ಟಿ (240),ಅನ್ವಿತ್ ಪ್ರಶಾಂತ್ ಮೂಲೆ (230),ಸಮೃತಿ ಎಂ ಗೌಡ (230),ಚಿನ್ಮಯ್(226),ಅನ್ನಿಕ(224),ವೃದ್ಧಿ ಎಸ್ ಶೆಟ್ಟಿ (208),ಅನುಷ್ಕ ಶರಣಗೌಡ ಬಿರದಾರ್ (200) ಅಂಕ ಪಡೆದು ಅರ್ಹತೆಗಳಿಸಿದ್ದಾರೆ.
ಒಟ್ಟು 18 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 14 ಮಂದಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ.ರಾಷ್ಟ್ರಮಟ್ಟದಲ್ಲಿ ಈ ಬಾರಿ ಸಿಎಂಎ ಫೌಂಡೇಶನ್ ತೇರ್ಗಡೆ ಫಲಿತಾಂಶ ಪ್ರಮಾಣ ಶೇ 25% ರಷ್ಟಿದ್ದರೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇ 77.77%ರಷ್ಟು ಮಂದಿ ತೇರ್ಗಡೆಯಾಗಿರುವುದು ವಿಶೇಷ ಸಾಧನೆಯಾಗಿದೆ.ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ,ಪ್ರಾಂಶುಪಾಲರು, ಸಿಬ್ಬಂದಿವರ್ಗ,ಪರೀಕ್ಷಾ ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.











































