ಜುಲೈ 6 ರವಿವಾರ, ಸಾಣೂರು ಜೋಡುಗರಡಿ ಬಾಕಿಮಾರು ಗುತ್ತುವಿನ ಗದ್ದೆಯಲ್ಲಿ…

ನಾಳೆ ಜು. 06 ರವಿವಾರದಂದು ಸಾಣೂರಿನ ಜೋಡುಗರಡಿ ಬಾಕಿಮಾರು ಗುತ್ತಿನ ಗದ್ದೆಯಲ್ಲಿ “ಕೆಸರ್ಡ್ ಒಂಜಿ ದಿನ” ಎಂಬ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಹಗ್ಗ ಜಗ್ಗಾಟ ಸೇರಿದಂತೆ ಮಕ್ಕಳಿಗಾಗಿ ಹಲವಾರು ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಪುರುಷರ ಹಗ್ಗ ಜಗಾಟದಲ್ಲಿ ಪ್ರಥಮ ಬಹುಮಾನ 5,001 ಹಾಗೂ ದ್ವಿತೀಯ ಬಹುಮಾನ 3,001 ದೊರೆಯಲಿದೆ. ಮಹಿಳೆಯರ ಹಗ್ಗಜಗಾಟದಲ್ಲಿ ಪ್ರಥಮ ಬಹುಮಾನ 3,001 ದ್ವಿತೀಯ ಬಹುಮಾನ 2,001 ದೊರೆಯಲಿದೆ. ಮಧ್ಯಾಹ್ನ 1 ಗಂಟೆಗೆ ಊಟದ ವ್ಯವಸ್ಥೆಯಿದ್ದು ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.













